Menu

ನಿರೂಪಕಿ ಅನುಶ್ರೀ ಮದುವೆ ಆಗಸ್ಟ್ 28ಕ್ಕೆ ಫಿಕ್ಸ್‌ ?

anushree marriage

ಕನ್ನಡದ ನಿರೂಪಕಿ ಅನುಶ್ರೀ ಮದುವೆಗೆ ದಿನಾಂಕ ಫಿಕ್ಸ್‌ ಆಗಿದೆ. ಕುಟುಂಬಸ್ಥರು ನೋಡಿದ ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀಯ ಮದುವೆ ನಡೆಯಲಿದೆ ಎನ್ನಲಾಗಿದೆ.

ಹುಡುಗನಿಗೆ ಸಂಬಂಧಿಸಿದಂತೆ ಇನ್ನಿತರ ಮಾಹಿತಿಯನ್ನು ಅನುಶ್ರೀ ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿದೆ. ಅನುಶ್ರೀ ಮದುವೆ ವಿಚಾರ ಕೇಳಿದಾಗಲೆಲ್ಲ ಈ ವರ್ಷವೇ ಮದುವೆ ಎಂದಿದ್ದರು.

ಹಲವು ಬಾರಿ ಸಾಮಾಜಿಕ ಮಾದ್ಯಮದಲ್ಲಿ ಅವರಿಗೆ ಮದುವೆಯಾಯಿತು ಎಂಬ ಸುದ್ದಿಗಳು ಹರಡುತ್ತಿದ್ದವು. ಇದೀಗ ಅವರು. ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಿ ಬಳಿಕ ಆಗಸ್ಟ್ 28ಕ್ಕೆ ಸಿನಿಮಾ ರಂಗದವರನ್ನು ಆಮಂತ್ರಿಸಿ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Related Posts

Leave a Reply

Your email address will not be published. Required fields are marked *