ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡಿರುವ ಹಿನ್ನೆಲೆ ಇರಾನ್ ಶಿಯಾ ಧರ್ಮಗುರು ನಾಸೆರ್ ಮಕರಿಮ್ ಶಿರಾಜಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಶತ್ರುಗಳನ್ನು ಗುರುತಿಸಿ ಸೇಡು ತೀರಿಸಿಕೊಳ್ಳುವುದು ಮುಖ್ಯ. ಪ್ರಪಂಚದಾದ್ಯಂತದ ಇರುವ ಮುಸ್ಲಿಮರು ಒಂದಾಗುವಂತೆ ಕರೆ ನೀಡಿ ಫತ್ವಾ ಹೊರಡಿಸಿದ್ದಾರೆ.
ಜಾಗತಿಕ ಇಸ್ಲಾಮಿಕ್ ಸಮುದಾಯದ ನಾಯಕತ್ವಕ್ಕೆ ಬೆದರಿಕೆ ಒಡ್ಡುವ ಯಾವುದೇ ವ್ಯಕ್ತಿ ಅಥವಾ ಸರ್ಕಾರಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಈ ಫತ್ವಾದಲ್ಲಿ ಹೇಳಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕನನ್ನು ಬೆದರಿಸುವ ಅಥವಾ ಹತ್ಯೆ ಮಾಡಲು ಪ್ರಯತ್ನಿಸುವವರು ಅಲ್ಲಾನ ಕೋಪಕ್ಕೆ ಗುರಿಯಾಗು ತ್ತಾರೆ. ಅದು ಅಲ್ಲಾಗೆ ಮಾಡಿದ ಅವಮಾನ ಮತ್ತು ಅಲ್ಲಾ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುತ್ತದೆ ಎಂದು ಫತ್ವಾ ಹೇಳಿದೆ.
ಅಮೆರಿಕ ಮತ್ತು ಇಸ್ರೇಲ್ ನಾಯಕರು ಇರಾನ್‌ನ ಸರ್ವೋಚ್ಚ ನಾಯಕನಿಗೆ ಪದೇ ಪದೆ ಬೆದರಿಕೆ ಹಾಕುತ್ತಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಥವಾ ಧಾರ್ಮಿಕ ನಾಯಕರನ್ನು ಹತ್ಯೆ ಮಾಡಲು ಯೋಜಿಸುವ ಯಾರಾದರೂ ಇಸ್ಲಾಮಿಕ್ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆಗೆ ಅರ್ಹರು ಎಂದು ವಿವರಿಸಲಾಗಿದೆ.
ಶತ್ರುವಿಗೆ ಮುಸ್ಲಿಮರು ಅಥವಾ ಇಸ್ಲಾಮಿಕ್ ರಾಷ್ಟ್ರಗಳು ನೀಡುವ ಯಾವುದೇ ಸಹಕಾರ ಅಥವಾ ಬೆಂಬಲ ನಿಷಿದ್ಧ. ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಈ ಶತ್ರುಗಳು ತಮ್ಮ ಮಾತುಗಳು ಮತ್ತು ತಪ್ಪುಗಳಿಗೆ ವಿಷಾದಿಸುವಂತೆ ಮಾಡುವುದು ಮಾಡುವ ಅಗತ್ಯವಿದೆ ಎಂದು ಫತ್ವಾದಲ್ಲಿ ಹೇಳಲಾಗಿದೆ.