Menu

Iran- Israel war: ಇರಾನ್‌ ದಾಳಿಗೆ ಇಸ್ರೇಲ್‌ನ ಆಸ್ಪತ್ರೆ ಧ್ವಂಸ

ಇರಾನ್ ಮತ್ತು ಇಸ್ರೇಲ್ ಸಂಘರ್ಷ ದಿನದಿಂದ ದಿನ ತೀವ್ರಗೊಳ್ಳುತ್ತ 7ನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳ ಮಧ್ಯೆ ಪರಸ್ಪರ ಮಿಸೈಲ್‌ ದಾಳಿ ಮುಂದುವರಿ ದಿದೆ. ಇರಾನ್‌ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗೆ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ʻಬೀರ್‌ಶೆಬಾದಲ್ಲಿರುವ ಸೊರೊಕಾʼ ಧ್ವಂಸವಾಗಿದೆ. ಸಾವು ನೋವು ಗಳ ಪ್ರಮಾಣ ಎಷ್ಟೆಂಬ ಖಚಿತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.

ಇರಾನ್‌ ಟೆಲ್‌ ಅವಿವ್‌ ಮೇಲೆ ನಡೆಸಿದ ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಮೂವರು ಇಸ್ರೇಲಿಗರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಸ್ರೇಲ್‌ ಇರಾನಿನ ಅಣ್ವಸ್ತ್ರ ಘಟಕ ಪ್ರದೇಶದಲ್ಲಿರುವ ನೀರಿನ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ಮಾಡಿದರೆ, ಇರಾನ್‌, ಇಸ್ರೇಲ್‌ನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇಡೀ ಇಸ್ರೇಲ್‌ನಲ್ಲಿ ಸೈರನ್‌ಗಳು ಮೊಳಗಿದ್ದು, ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಲಾಗಿದೆ.

ಪ್ರತೀಕಾರದ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್‌, ಇರಾನ್‌ನ ಖೊಂಡಾಬ್ ಪರಮಾಣು ಘಟಕದ ಬಳಿ ನೀರಿನ ಸಂಪನ್ಮೂಲ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನ್ಯೂಕ್ಲಿಯರ್‌ ಘಟಕವೇ ಇಸ್ರೇಲ್‌ನ ಮುಂದಿನ ಗುರಿ ಎಂದು ಹೇಳಲಾಗಿದೆ. ಬುಧವಾರ ತಡರಾತ್ರಿ ವೈಮಾನಿಕ ದಾಳಿ ನಡೆಸಿ ಹಿಜ್ಬುಲ್ಲಾ ಕಮಾಂಡರ್‌ ಯಾಸಿನ್ ಇಜ್ ಎ-ದಿನ್ ಅವರನ್ನು ಬ್ಯಾರಿಶ್‌ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

Related Posts

Leave a Reply

Your email address will not be published. Required fields are marked *