ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಹಲವು ಗುರಿಗಳು ದಾಳಿಗೆ ಇನ್ನೂ ಉಳಿದಿವೆ. ಶಾಂತಿ ಸಂಧಾನಕ್ಕೆ ಮುಂದಾಗದಿದ್ದರೆ ಮತ್ತೆ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ
ಇರಾನ್‌ನ ಫೋರ್ಡೊ, ನತಾನ್ಸ್ ಮತ್ತು ಎಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಎಲ್ಲ ವಿಮಾನಗಳು ಸುರಕ್ಷಿತವಾಗಿ ಹೊರಗೆ ಬಂದಿವೆ. ಅಣು ಕೇಂದ್ರ ಫೋರ್ಡೊ ಮೇಲೆ ಪೂರ್ಣ ಪ್ರಮಾಣದ ಬಾಂಬ್ ದಾಳಿ ನಡೆಸಲಾಯಿತು ಎಂದು ಟ್ರಂಪ್ ಸೋಷಿಯಲ್ ಮೀಡಿಯಾ ‘ಟ್ರತ್’ ನಲ್ಲಿ ಮಾಹಿತಿ ನೀಡಿದ್ದಾರೆ.
ದಾಳಿ ನಡೆಸಿದ ಅಮೆರಿಕದ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ವಾಯು ದಾಳಿಯ ನಂತರ ಇರಾನ್ ಅಮೆರಿಕದ ನಾಗರಿಕರು ಹಾಗೂ ಮಿಲಿಟರಿ ಸಿಬ್ಬಂದಿಯನ್ನ ಗುರಿಯಾಗಿಸಿ ದಾಳಿ ನಡೆಸುವ ಎಚ್ಚರಿಕೆ ನೀಡಿದೆ.