Menu

ಇರಾನ್‌-ಇಸ್ರೇಲ್‌ ಸಂಘರ್ಷ: ಹರ್ಮುಜ್ ಜಲಸಂಧಿ ಹಾದುಹೋಗಲು 18 ಕೋಟಿ ರೂ. ಟೋಲ್?

ಇರಾನ್‌- ಇಸ್ರೇಲ್‌ ಯುದ್ಧ ಆರಂಭ ಬಳಿಕ ಅಮೆರಿಕ ಕಾರ್ಯಾಚರಣೆಯ ಪರಿಣಾಮವಾಗಿ ಇರಾನ್‌ ಅಮೆರಿಕದ ಸೇನಾ ನೆಲೆ ಸೇರಿದಂತೆ ಕೈಗಾರಿಕಾ ಘಟಕಗಳಿರುವ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ದಾಳಿ ಮುಂದುವರಿಸಿದೆ. ಹೀಗಾಗಿ ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿದ್ದು, ಹರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳಿಗೆ 18 ಕೋಟಿ ರೂ. ಟೋಲ್ ವಿಧಿಸಲು ಇರಾನ್‌ ಮುಂದಾಗಿದೆ.

ಇರಾನ್‌ನ ಈ ಕಠಿಣ ಕ್ರಮವು ಜಾಗತಿಕ ತೈಲ, ಅನಿಲ ಮತ್ತು ವ್ಯಾಪಾರ ಪೂರೈಕೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ವಿಶ್ವದ ತೈಲ ಸಾಗಣೆಯ 20% ಇದೇ ಮಾರ್ಗದಲ್ಲಿ ಹಾದುಹೋಗುತ್ತದೆ ಎಂಬುದು ಗಮನಾರ್ಹ. ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಸಂಘರ್ಷದ ನಂತರ ಪರಿಸ್ಥಿತಿ ಹೆಚ್ಚು ಸೂಕ್ಷ್ಮವಾಗಿದೆ. ನಿರ್ಣಾಯಕ ಜಲಮಾರ್ಗವನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಗುರುತಿಸುವ ಮೂಲಕ ಭಾರಿ ಪ್ರಮಾಣದ ಸುಂಕವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಇರಾನ್‌ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರಾಗಿರುವ ಇರಾನಿನ ಶಾಸಕ ಅಲಾಯೆದ್ದೀನ್ ಬೊರೊಜೆರ್ಡಿ ತಿಳಿಸಿದ್ದಾರೆ.

48 ಗಂಟೆಗಳ ಒಳಗೆ ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಮೂಲಸೌಕರ್ಯವನ್ನು ಗುರಿಯಾಗಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಬೊರೊಜೆರ್ಡಿ ಹೇಳಿಕೆ ನೀಡಿದ್ದಾರೆ. ಇರಾನ್ ವಿರೋಧಿಗಳನ್ನು ಹೊರತುಪಡಿಸಿ ಉಳಿದ ದೇಶಗಳಿಗೆ ಹರ್ಮುಜ್ ಜಲಸಂಧಿ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *