Menu

ಇರಾನ್‌-ಇಸ್ರೇಲ್‌ ಸಂಘರ್ಷ: ಅಮೆರಿಕ ಬೆಂಬಲಕ್ಕೆ ಬ್ರಿಟನ್, ಫ್ರಾನ್ಸ್, ಜರ್ಮನಿ

ಇರಾನ್‌-ಇಸ್ರೇಲ್‌ ಸಂಘರ್ಷ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದೆ. ಇರಾನ್‌ನ ಸೇನಾ ಪ್ರತಿದಾಳಿಯನ್ನು ಎದುರಿಸಲು ಅಮೆರಿಕ ಜೊತೆ ಕೈಜೋಡಿಸುವುದಾಗಿ ಬ್ರಿಟನ್ , ಫ್ರಾನ್ಸ್ ಮತ್ತು ಜರ್ಮನಿ ಮುಂದಾಗಿವೆ.

‌ಈ ದೇಶಗಳ ಉನ್ನತ ನಾಯಕರಾದ ಕೀರ್ ಸ್ಟಾರ್ಮರ್, ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಡ್ರಿಕ್ ಮೆರ್ಜ್ ಅವರು, ಮಿತ್ರರಾಷ್ಟ್ರಗಳ ಗುರಿಗಳ ವಿರುದ್ಧ ಇರಾನ್‌ ದಾಳಿಗಳನ್ನು ನಡೆಸುತ್ತಿದೆ. ಈ ದಾಳಿಗಳು ತಮ್ಮ ನಾಗರಿಕರು ಮತ್ತು ಈ ಪ್ರದೇಶದಲ್ಲಿ ನಿಯೋಜಿಸಲಾದ ಮಿಲಿಟರಿ ಸಿಬ್ಬಂದಿಗೆ ನೇರ ಬೆದರಿಕೆ ಒಡ್ಡಿವೆ ಎಂದು ಹೇಳಿದ್ದಾರೆ .ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ನಿರ್ವಹಿಸಲು ಅಮೆರಿಕ ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ಯಾವುದೇ ನಿರ್ದಿಷ್ಟ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಸೈಪ್ರಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸರಣಿ ದಾಳಿಗಳು ನಡೆದ ಬೆನ್ನಲ್ಲೇ ಮೂರು ದೇಶಗಳಿಂದ ಹೇಳಿಕೆ ಬಂದಿದೆ. ಬ್ರಿಟನ್ ರಕ್ಷಣಾ ಸಚಿವಾಲಯವು ಅಕ್ರೋತಿರಿ ನೆಲೆಯಲ್ಲಿರುವ ಸೇನಾ ನೆಲೆಯನ್ನು ಶಂಕಿತ ಡ್ರೋನ್ ಹೊಡೆದಿದೆ ಎಂದು ಹೇಳಿದೆ. ಫ್ರಾನ್ಸ್‌ನಲ್ಲಿ ಫ್ರೆಂಚ್ ನೌಕಾ ನೆಲೆಯಲ್ಲಿನ ಹ್ಯಾಂಗರ್‌ಗೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾನುವಾರ ಆರೋಪಿಸಿದ್ದಾರೆ.

ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ಹೊರತಾಗಿ, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಓಮನ್ ಮತ್ತು ಬಹ್ರೇನ್ ದೇಶಗಳ ವಿದೇಶಾಂಗ ಮಂತ್ರಿಗಳು ತುರ್ತು ವರ್ಚುವಲ್ ಸಭೆ ನಡೆಸಿ ಇರಾನ್ ಕ್ಷಿಪಣಿ ದಾಳಿಗಳು ಅಮೆರಿಕದ ಸೇನಾನೆಲೆಗಳು, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ವಸತಿ ಪ್ರದೇಶಗಳಿಗೆ ಹೊಡೆದಿದವೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *