Menu

Iran-Israel war: ತಕ್ಷಣ ಟೆಹ್ರಾನ್‌ ತೊರೆಯುವಂತೆ ಇರಾನಿಗಳಿಗೆ ಟ್ರಂಪ್‌ ತಾಕೀತು

ಇರಾನ್ ಜನತೆ ತಕ್ಷಣವೇ ಟೆಹ್ರಾನ್‌ ತೊರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸಿದ್ದಾರೆ. ನಾನು ಹೇಳಿದ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಎಲ್ಲ ಇರಾನಿಗಳು ತಕ್ಷಣ ಟೆಹ್ರಾನ್ ಅನ್ನು ಬಿಟ್ಟು ಹೊರಡಿ ಎಂದು ಎಕ್ಸ್‌ ಖಾತೆಯಲ್ಲಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಅವೆರಡು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗದೆ ಜಾಗತಿಕವಾಗಿ ವ್ಯಾಪಿಸುತ್ತಿವೆ. ಉಭಯ ದೇಶಗಳು ಪರಸ್ಪರ ದಾಳಿ ಪ್ರತಿದಾಳಿ ಮುಂದುವರಿಸಿವೆ. ಐದು ದಿನಗಳಲ್ಲಿ ಇರಾನ್‌ನಲ್ಲಿ 224 ಮಂದಿ ಪ್ರಾಣ ಕಳೆದುಕೊಂಡಿದ್ದರೆ ಇಸ್ರೇಲ್‌ನಲ್ಲಿ 24 ನಾಗರಿಕರು ಮೃತಪಟ್ಟಿದ್ದಾರೆ.

ಮಂಗಳವಾರ ಮುಂಜಾನೆ ಟೆಹ್ರಾನ್‌ನಲ್ಲಿ ಸ್ಫೋಟಗಳು ಮತ್ತು ಭಾರೀ ವಾಯು ರಕ್ಷಣಾ ಗುಂಡಿನ ದಾಳಿ ನಡೆದಿರುವುದಾಗಿ ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ. ಪ್ರಮುಖ ಪರಮಾಣು ನೆಲೆಯಾದ ನಟಾಂಜ್‌ನಲ್ಲಿಯೂ ವಾಯು ರಕ್ಷಣಾ ಪಡೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿವೆ.

ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ವಾಯುದಾಳಿ ಸೈರನ್‌ಗಳು ಮಧ್ಯರಾತ್ರಿ ಮೊಳಗಿವೆ. ಇರಾನಿನ ಕ್ಷಿಪಣಿಗಳನ್ನು ಗುರಿಯಾಗಿಸಿ ಮತ್ತೆ ಇಸ್ರೇಲ್‌ ದಾಳಿ ಮುಂದುವರಿಸಿದೆ. ಇರಾನ್ ದಾಳಿಯಿಂದ ಹಾನಿಗೊಳಗಾದ 3,000 ಇಸ್ರೇಲಿಗರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *