ಉತ್ತರ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಹೈಫಾ ನಗರ ಸೇರಿದಂತೆ 15 ಕ್ಕೂ ಹೆಚ್ಚು ಕಡೆಗಳಲ್ಲಿ ಸ್ಫೋಟ ಸಂಭವಿಸಿದೆ. ಅಮೆರಿಕ-ಇಸ್ರೇಲ್ ನಡೆಸಿದ ದಾಳಿಗಳಲ್ಲಿ ತನ್ನ 34 ಪ್ರಜೆಗಳನ್ನು ಕಳೆದುಕೊಂಡಿದ್ದಕ್ಕೆ ಇರಾನ್ ಈ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
ಹೈಫಾದಲ್ಲಿ ಬಹುಮಹಡಿ ಕಟ್ಟಡಗಳಿಗೆ ಹಾನಿಯಾಗಿದೆ. ಕದನ ವಿರಾಮ ಸಂಬಂಧ ಕತಾರ್, ಟರ್ಕಿ ಮಧ್ಯಸ್ಥಿಕೆ ತಿರಸ್ಕರಿಸಿದ ಇರಾನ್, ಅಮೆರಿಕ ಜೊತೆ ಮಾತುಕತೆ ಅಗತ್ಯವಿಲ್ಲ. ಯಾರ ಮಧ್ಯಸ್ಥಿಕೆಯೂ ಇನ್ನು ಮುಂದೆ ಅಗತ್ಯವಿಲ್ಲ ಎಂದು ಎಂದು ಸಂದೇಶ ನೀಡಿದೆ.
ದಕ್ಷಿಣ ಇಸ್ರೇಲ್‌ನ ಡಿಮೋನಾ ಪ್ರದೇಶದ ಬಳಿ ಪೆಟ್ರೋಕೆಮಿಕಲ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಕುವೈತ್‌ನ ಬುಬಿಯಾನ್ ದ್ವೀಪದಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಡ್ರೋನ್‌ಗಳ ಮೂಲಕ ದಾಳಿ ನಡೆಸುವುದಾಗಿ ಇರಾನ್ ಹೇಳಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೆಟ್ರೋಕೆಮಿಕಲ್ ಸ್ಥಾವರದ ಮೇಲೂ ದಾಳಿ ಮಾಡಿದ್ದು, ಹಾನಿಯ ಪ್ರಮಾಣ ನಿರ್ಣಯಿಸುವವರೆಗೆ ಸ್ಥಾವರದಲ್ಲಿನ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಇರಾನ್‌ನ ಹಲವು ಪ್ರಾಂತ್ಯಗಳನ್ನು ಗುರಿಯಾಗಿಸಿ ಅಮೆರಿಕ – ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಸೋಮವಾರ ಇರಾನ್‌ನ 34 ಜನ ಮೃತಪಟ್ಟಿದ್ದಾರೆ. ಟೆಹ್ರಾನ್‌ನಲ್ಲಿ 23 ಜನರು, ಕೋಮ್ ನಗರದಲ್ಲಿ 5 ಜನರು ಮತ್ತು ದಕ್ಷಿಣ ನಗರವಾದ ಬಂದರ್-ಎ ಲೆಂಗೆಯಲ್ಲಿ 6 ಜನರು ಪ್ರಾಣ ಕಲೆದುಕೊಂಡಿದ್ದು, ಆರು ಮಕ್ಕಳೂ ಸೇರಿದ್ದಾರೆ.


