ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ ತಂಡಗಳು ಮಾರ್ಚ್ 22ರಂದು ನಡೆಯುವ ಐಪಿಎಲ್ ಟಿ-20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ ಎಂದು ಹೇಳಲಾಗಿದೆ.
ಕ್ರಿಕ್ ಬಜ್ ವೆಬ್ ನಲ್ಲಿ ಐಪಿಎಲ್ ಟಿ-20 ಟೂರ್ನಿಯ 2025ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಾಗಿದೆ.
ಆರ್ ಸಿಬಿ ತಂಡದ ನಾಯಕರಾಗಿ ರಜತ್ ಪಟಿದಾರ್ ನೇಮಕಗೊಂಡ ಬೆನ್ನಲ್ಲೇ ಐಪಿಎಲ್ ವೇಳಾಪಟ್ಟಿ ಸೋರಿಕೆಯಾಗಿದ್ದು, ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದ ಮೂಲಕ ರಜತ್ ಪಟಿದಾರ್ ನಾಯಕನಾಗಿ ಐಪಿಎಲ್ ನಲ್ಲಿ ಅಭಿಯಾನ ಆರಂಭಿಸಲಿದ್ದಾರೆ.
ಕಳೆದ ಬಾರಿಯ ರನ್ನರ್ ಅಪ್ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮಾರ್ಚ್ 23ರಂದು ಮುಖಾಮುಖಿ ಆಗಲಿವೆ. ಮೇ 25ರಂದು ಫೈನಲ್ ಪಂದ್ಯ ನಡೆಯಲಿದ್ದು, ಸ್ಥಳ ನಿಗದಿಯಾಗಿಲ್ಲ.