ಸೈಬರ್ ಕ್ರೈಂ ಸಂತ್ರಸ್ತರಿಗೆ ವಾಪಸ್ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ನಕಲಿ ದಾಖಲೆ ಬಳಸಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಣವನ್ನು ಲೂಟಿ ಮಾಡಿ ವೈದ್ಯಕೀಯ ರಜೆ ಪಡೆದು ಲವರ್ಸ್ ಜೊತೆ ಗೋವಾ, ಮನಾಲಿ ಮತ್ತು ಕಾಶ್ಮೀರ ಸೇರಿದಂತೆ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮಜ ಉಡಾಯಿಸಿದ್ದಾರೆ.
ಹೀಗೆ ಹನ ವಂಚಿಸ ಮಜ ಮಾಡಿರುವ ಇಬ್ಬರೂ ಇನ್ಸ್‌ಪೆಕ್ಟರ್‌ಗಳು ವಿವಾಹಿತರು. ಆದರೆ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದಾರೆ. ದೆಹಲಿಯ ಸಬ್-ಇನ್‌ಸ್ಪೆಕ್ಟರ್ ಅಂಕುರ್ ಮಲಿಕ್ ಮತ್ತು ಸಬ್-ಇನ್‌ಸ್ಪೆಕ್ಟರ್ ನೇಹಾ ಪುನಿಯಾ ಈ ಕೃತ್ಯ ಎಸಗಿದ್ದು, ಸಿಕ್ಕಿಬಿದ್ದಿದ್ದಾರೆ. ಸೈಬರ್ ಕ್ರೈಂ ಪ್ರಕರಣದಲ್ಲಿ ಸಂತ್ರಸ್ತರಿಗೆ ಅವರು ನೀಡಿದ ದೂರಿನ ಆಧಾರದ ಮೇಲೆ ಹಣವನ್ನು ವಾಪಸ್ ಮಾಡಬೇಕು. ಇವರಿಬ್ಬರು ದೂರು ನೀಡಿದವರ ಹೆಸರನ್ನೇತಿರುಚಿದ್ದಾರೆ. ತಮಗೆ ಬೇಕಾದ ಆಪ್ತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು, ಕೋರ್ಟ್ಗೂ ಅವರದ್ದೇ ಹೆಸರು ಕೊಟ್ಟು ಇವರೇ ಸಂತ್ರಸ್ತರು ಎಂದು ಬಿಂಬಿಸಿ ವಶಪಡಿಸಿಕೊಂಡ ಹಣವನ್ನು ವರ್ಗಾಯಿಸಿದ್ದಾರೆ.
ಹೀಗೆ ಹಣ ಲಪಟಾಯಿಸಿದ ಮೇಲೆ ಸಬ್-ಇನ್‌ಸ್ಪೆಕ್ಟರ್ ಅಂಕುರ್ ಮಲಿಕ್ ಏಳು ದಿನಗಳ ವೈದ್ಯಕೀಯ ರಜೆ ಪಡೆದು ಮತ್ತೆ ಕರ್ತವ್ಯಕ್ಕೆ ಹಾಜರಾಗಿಲ್ಲ. ನೇಹಾ ಪುನಿಯಾ ಕೂಡ ಪ್ರಕರಣದ ನಂತರ ಕಾಣೆಯಾಗಿದ್ದರು. ಬಳಿಕ ಸಂದೇಹ ಬಂದು ತನಿಖೆ ನಡೆದಾಗ ಅಸಲಿ ಸಂತ್ರಸ್ತರಿಗೆ ಹಣ ಸಿಗಲಿಲ್ಲ ಎನ್ನುವ ವಿಷಯ ಬಹಿರಂಗಗೊಂಡಿದೆ. ಇಂದೋರ್ ತಲುಪಿದ ನಂತರ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ನಗದು ನೀಡಿ ಖರೀದಿಸಿದ್ದರು. ಮಧ್ಯಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಯಾರ ಕಣ್ಣಿಗೂ ಬೀಳದಂತೆ ಹೋಗಿ ವಾಸಿಸುವ ಪ್ಲ್ಯಾನ್ ಮಾಡಿದ್ದರು.