Menu

ಡಿಜಿಟಲ್ ಹೆಚ್ಚು ಬಳಕೆಯಿಂದ ನಿದ್ರಾಹೀನತೆ ಸಮಸ್ಯೆ: ವಾಕೇಫಿ ಸಮೀಕ್ಷೆ ವರದಿ

wakefi

ಬೆಂಗಳೂರು: D2C ನಿದ್ರೆ ಮತ್ತು ಗೃಹಪರಿಹಾರಗಳನ್ನು ಒದಗಿಸುವ Wakefit.co, ತನ್ನ ಇನ್-ಹೌಸ್ ವಾರ್ಷಿಕ ಸರ್ವೇಕ್ಷಣೆ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ ಕಾರ್ಡ್ (GISS) 2025ದ 8ನೆ ಆವೃತ್ತಿಯನ್ನು ಪ್ರಸ್ತುತಪಡಿಸಿ ಭಾರತದ ಬದಲಾಗುತ್ತಿರುವ ನಿದ್ರಾ ಪ್ರವೃತ್ತಿಗಳ ಕುರಿತು ಮಾಹಿತಿ-ಚಾಲಿತ ದೃಷ್ಟಿಕೋನ ಒದಗಿಸಿದೆ. ಇತ್ತೀಚಿನ ಶೋಧಗಳು, ಡಿಜಿಟಲ್ ಅಡಚಣೆ ಮತ್ತು ಒತ್ತಡಗಳಿಂದ ಕೂಡಿದ ನಿದ್ರೆಯ ಕೊರತೆಯ ಪ್ರವೃತ್ತಿಯು ಬೆಂಗಳೂರಿನಲ್ಲಿ ಪ್ರಮುಖ ತಡೆಕಾರಕಗಳಾಗಿರುವುದನ್ನು ಎತ್ತಿ ತೋರಿಸುತ್ತವೆ.

ಸರ್ವೇಕ್ಷಣೆಯ ಪ್ರಮುಖ ಶೋಧಗಳು

ನಿದ್ರೆಯ ಕೊರತೆ ಇದ್ದೇ ಇದೆ: 64% ಬೆಂಗಳೂರಿಗರು ಸತತವಾಗಿ ರಾತ್ರಿ 11 ಬಳಿಕ ನಿದ್ರಿಸುತ್ತಾರೆ, ಇದು ಶಿಫಾರಸು ಮಾಡಿರುವ ರಾತ್ರಿ 10 ಘಂಟೆಗಿಂತ ಹೆಚ್ಚು. ಕಳೆದ ವರ್ಷ ಇದು 38% ಇತ್ತು
ಹೆಚ್ಚುತ್ತಿರುವ ನಿತ್ರಾಣ ಮತ್ತು ನಿದ್ರಾಹೀನತೆಯ ಆತಂಕಗಳು: 54% ಪ್ರತಿಕ್ರಿಯಾದಾರರು, ಬೆಳಿಗ್ಗೆ ಎದ್ದ ಬಳಿಕವೂ ವಿಶ್ರಾಂತಿಯಿಲ್ಲದ ಭಾವ ವರದಿ ಮಾಡಿದ್ದಾರೆ. ಇದು ಕಳೆದ ವರ್ಷ 46% ಆಗಿತ್ತು. ಮೂವರು(3) ಬೆಂಗಳೂರಿಗರ ಪೈಕಿ ಒಬ್ಬರು(1) ತಮಗೆ ನಿದ್ರಾಹೀನತೆ ಇರಬಹುದು ಎಂದು ಅನುಮಾನಿಸಿದ್ದಾರೆ.
ಡಿಜಿಟಲ್ ಅಡಚಣೆಗಳು ಮುಂದುವರಿಯುತ್ತಿವೆ: ಮಲಗುವ ವೇಳೆಯ ಫೋನ್ ಬಳಕೆಯ ಅತ್ಯಧಿಕ ಸಂಖ್ಯೆಗಳ ಪೈಕಿ ಒಂದಾಗಿ ಬೆಂಗಳೂರು ದಾಖಲಿಸಿದೆ. (90%), 55.5% ಮಂದಿ ತಡರಾತ್ರಿ ಸ್ಕ್ರೋಲಿಂಗ್ ಮತ್ತು ಕಾಲಹರಣ ವೀಕ್ಷಣೆಯು ತಡವಾಗಿ ನಿದ್ರಿಸುವುದಕ್ಕೆ ಕಾರಣ ಎಂದು ದೂರಿದ್ದಾರೆ. ತತ್ಪರಿಣಾಮವಾಗಿ, 61% ಕೆಲಸದ ಮೇಲಿರುವಾಗ ಹಗಲು ನಿದ್ರೆಯನ್ನು ಅನುಭವಿಸುತ್ತಿದ್ದಾರೆ
ಒತ್ತಡ ನಿದ್ರೆಯನ್ನು ಕಸಿದುಕೊಳ್ಳುತ್ತಿದೆ: 33% ಬೆಂಗಳೂರಿಗರು, ತಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಎದ್ದಿರುತ್ತಾರೆ, ಇದು ಕಳೆದ ವರ್ಷ ಇದ್ದ 29%ಗಿಂತ ಹೆಚ್ಚಾಗಿದ್ದು, ಒತ್ತಡ-ಸಂಬಂಧಿತ ನಿದ್ರಾ ಅಡಚಣೆಗಳನ್ನು ಇದು ಸೂಚಿಸುತ್ತದೆ. ಹೆಚ್ಚುವರಿಯಾಗಿ, 42% ಮಂದಿ ಸಮೂಹ ಮಾಧ್ಯಮ ಬ್ರೌಸ್ ಮಾಡಿದ್ದರಿಂದ ಎದ್ದಿದ್ದುದಾಗಿ ವರದಿ ಮಾಡಿದ್ದಾರೆ.

ಉತ್ತಮ ಮಲಗುವ ಪದ್ಧತಿ(ಅಭ್ಯಾಸ)ಗಳೆಡೆಗೆ ನಿಧಾನ ಬದಲಾವಣೆ

ಮೇಲಿನ ಪ್ರವೃತ್ತಿಗಳ ಹೊರತಾಗಿಯೂ, ನಿದ್ರೆಯ ಗುಣಮಟ್ಟದ ಕುರಿತಾದ ಜಾಗೃತಿ ನಿಧಾನವಾಗಿ ಹೆಚ್ಚಾಗುತ್ತಿದೆ. 40% ಪ್ರತಿಕ್ರಿಯಾದಾರರು ಮಲಗುವ ಮುನ್ನ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದರಿಂದ ನಿದ್ರೆ ಸುಧಾರಣೆಯಾಗಬಲ್ಲದು ಎಂದು ಅಂಗೀಕರಿಸಿದ್ದಾರೆ ಮತ್ತು 36% ನಿರಂತರ ನಿದ್ರಾ ದಿನಚರಿ ನಿರ್ಮಾಣಮಾಡಿಕೊಳ್ಳುವೆಡೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರು, ಸತತವಾದ ನಿದ್ರಾ ಸವಾಲುಗಳ ಹಿಡಿತದಲ್ಲಿ ಸಿಕ್ಕಿಬಿದ್ದಿರುವಂತಹ ಸಮಯದಲ್ಲಿ, ಈ ಶೋಧಗಳು, ಆರೋಗ್ಯಕರವಾದ ನಿದ್ರಾ ಪದ್ಧತಿಗಳನ್ನು ಖಾತರಿಪಡಿಸಲು ಜೀವನಶೈಲಿ ಬದಲಾವಣೆಗಳ ಅಗತ್ಯವನ್ನು ಸೂಚಿಸಿವೆ.
Wakefit.co ನಡೆಸಿದ ವಾರ್ಷಿಕ ಇನ್-ಹೌಸ್ ಸರ್ವೇಕ್ಷಣೆಯಾದ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ ಕಾರ್ಡ್, ಈಗ ತನ್ನ ಎಂಟನೇ ಆವೃತ್ತಿಯಲ್ಲಿದೆ.

2025ರ ವರದಿಯು, ಮಾರ್ಚ್ 2024 ಹಾಗೂ ಫೆಬ್ರವರಿ 2025 ನಡುವೆ, ಭಾರತದ ವಿವಿಧ ಭೌಗೋಳಿಕ ಪ್ರದೇಶಗಳು ಹಾಗೂ ವಯೋಗುಂಪುಗಳಿಂದ ಸಂಗ್ರಹಿಸಲಾಗಿದ್ದ 4,500+ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿತ್ತು. ಮಾಹಿತಿ-ಚಾಲಿತ ಅಂತರ್ದೃಷ್ಟಿಗಳ ಮೂಲಕ ಮತ್ತು ಜಾಗೃತಿ ನಿರ್ಮಾಣ ಉಪಕ್ರಮಗಳ ಮೂಲಕ ನಿದ್ರೆ ಮತ್ತು ಗೃಹ ಪರಿಹಾರಗಳ ಪರಿಸರ ವ್ಯವಸ್ಥೆಗೆ ಕೊಡುಗೆ ಸಲ್ಲಿಸುವುದು Wakefit.coದ ಗುರಿಯಾಗಿದೆ.

Related Posts

Leave a Reply

Your email address will not be published. Required fields are marked *