ಕೊಡಗಿನ ಸುಂಟಿಕೊಪ್ಪದಲ್ಲಿ ಭುಜ ನೋವು ಎಂದು ಖಾಸಗಿ ಕ್ಲಿನಿಕ್‌ಗೆ ಹೋಗಿ ಇಂಜೆಕ್ಷನ್ ಪಡೆದುಕೊಂಡ ಯುವಕ ಮೃತಪಟ್ಟಿದ್ದಾನೆ. ವಿನೋದ್ (34) ಮೃತಪಟ್ಟ ಯುವಕ.
ವಿನೋದ್ ಭುಜ ನೋವು ಬಾಧಿಸುತ್ತಿದೆಯೆಂದು ಸಂಜೆ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಅಲ್ಲಿ ವೈದ್ಯರು ಅವರಿಗೆ ಎರಡು ಇಂಜೆಕ್ಷನ್ ಚುಚ್ಚಿದದರು. ಅಲ್ಲಿಂದ ಮನೆಗೆ ಹೋಗುತ್ತಿದ್ದಂತೆ ವಿನೋದ್ ಅಸ್ವಸ್ಥಗೊಂಡಿದ್ದು, ತಕ್ಷಣವೇ ಮನೆಯವರು ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಅಸ್ಪತ್ರೆಗೆ ಬರುವಷ್ಟರಲ್ಲಿ ಯುವಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕೊಡಗು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಯುವಕನ ಮೃತದೇಹವನ್ನು ಇರಿಸಲಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಆಗಮಿಸಿದ್ದು, ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ವೈದ್ಯನ ನಿರ್ಲಕ್ಷ್ಯದಿಂದ ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ ಯುವಕ ಮೃತಪಟ್ಟಿರುವುದಾಗಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಚಿನ್ನ , ಸೈಟ್‌ಗಾಗಿ ತಾಯಿಯ ಕೊಲೆಗೈದ ಮಗ
ಹುಬ್ಬಳ್ಳಿಯ ಬ್ರಹ್ಮಗಿರಿ ಕಾಲೊನಿಯಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ನಿವೃತ್ತ ನೌಕರ ಅಶೋಕ್ ಎಂಬಾತ ತನ್ನ ತಾಯಿ ನಿಂಗವ್ವ ಮುಳಗುಂದ(78) ಎಂಬವರನ್ನು ಕೊಲೆಗೈದು, ಯಾರೋ ಕೊಲೆ ಮಾಡಿರುವುದಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅನುಮಾನ ಬಂದು ಪೊಲೀಸರು ವಿಚಾರಿಸಿದಾಗ ಮಗನೇ ಹತ್ಯೆ ಮಾಡಿರುವುದು ಬಯಲಾಗಿದ್ದು, ಆತನನ್ನು ಬಂಧಿಸಿದ್ದಾರೆ.
ನಿಂಗವ್ವ ಮುಳಗುಂದ ನವೆಂಬರ್ 4 ರಂದು ಮನೆಯಲ್ಲಿ ಮಲಗಿದ್ದರು. ಪತಿ ಮಲ್ಲಪ್ಪ ಮನೆಯ ಹೊರಗಡೆ ಮಲಗಿದ್ದರು. ರಾತ್ರಿ ನಿಂಗವ್ವರನ್ನು ಕೊಲೆ ಮಾಡಲಾಗಿತ್ತು. ಬೆಳಗ್ಗೆ ಮನೆಗೆ ಬಂದಿದ್ದ ಅಶೋಕ್, ತನ್ನ ತಾಯಿಯನ್ನು ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ವಿದ್ಯಾನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಶೋಕ್ ತಾಯಿಯನ್ನು ಕೊಂದು ಬಳಿಕ ತಾವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಯಾರೋ ಕೊಲೆ ಮಾಡಿರಬಹುದು ಅಂದುಕೊಂಡಿದ್ದರು. ನಿಂಗವ್ವ ಅವರ ಹೆಣ್ಣು ಮಕ್ಕಳು ಸಹೋದರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪೊಲೀಸರು ಅಶೋಕ್ರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಈ ವೇಳೆ ಮಗನೇ ತಾಯಿಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.
ಚಿನ್ನ ಮತ್ತು ಸೈಟ್ ವಿಚಾರವೇ ನಿಂಗವ್ವ ಅವರ ಕೊಲೆಗೆ ಕಾರಣ. ನಿಂಗವ್ವ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಅಶೋಕ್ ಹೊಸ ಮನೆ ಕಟ್ಟಿಸಿಕೊಂಡು ವಾಸವಾಗಿದ್ದ. ಹೆತ್ತವರ ನೋಡಿಕೊಳ್ಳದ ಆತ ತಾಯಿಯಿ ಮೈಮೇಲಿದ್ದ ಬಂಗಾರಕ್ಕೆ ಆಸೆ ಪಟ್ಟಿದ್ದ. ವರ್ಷದ ಹಿಂದೆ ನಿಂಗವ್ವ 30 ಗ್ರಾಂ ಬಂಗಾರವನ್ನು ಹೆಣ್ಣು ಮಕ್ಕಳಿಗೆ ನೀಡಿದ್ದರಂತೆ. ಬಂಗಾರ ಕೊಟ್ಟವರ ಮನೆಯಲ್ಲಿಯೇ ಹೋಗಿ ನೀನು ಇರು ಎಂದು ಅಶೋಕ ತಾಯಿಗೆ ಕಿರುಕುಳ ಕೊಡುತ್ತಿದ್ದನಂತೆ. ನಿಂಗವ್ವ ಸೈಟ್ ವೊಂದನ್ನು ಹೆಣ್ಣು ಮಕ್ಕಳಿಗೆ ನೀಡಲು ಮುಂದಾಗಿದ್ದು, ಇದು ಅಶೋಕ್ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ನಿಂಗವ್ವರನ್ನು ಮನೆಯಲ್ಲಿ ಕೂಡಿ ಹಾಕಿ, ಬೀಗ ಹಾಕಿಕೊಂಡು ಹೋಗಿ. ರಾತ್ರಿ ಮನೆಗೆ ಬಂದು ಕಟ್ಟಿಗೆ ಮಣೆಯಿಂದ ಹೊಡೆದುಕೊಲೆ ಮಾಡಿ ಹೋಗಿದ್ದಾರೆ.


