Menu

ಸತತ 8ನೇ ಬಾರಿ ಇಂದೋರ್ ಗೆ ಕ್ಲೀನ್ ಸಿಟಿ ಪ್ರಶಸ್ತಿ, 3ಕ್ಕೇರಿದ ಮೈಸೂರು!

indore

ಬೆಂಗಳೂರು: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್‌ ಸತತ 8ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮೂರನೇ ಸ್ಥಾನಕ್ಕೇರಿದೆ.

ಗುರುವಾರ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿ ಪ್ರಕಟಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮರ್ಮು ‘ಸೂಪರ್ ಸ್ವಚ್ಛ ಲೀಗ್ ನಗರಗಳ ಪಟ್ಟಿಯಲ್ಲಿ ಇಂದೋರ್ ಅತ್ಯಂತ ಸ್ವಚ್ಛ ನಗರವೆಂದು ಘೋಷಿಸಲಾಗಿದೆ. ಛತ್ತೀಸಗಢದ ಅಂಬಿಕಾಪುರ 2 ಹಾಗೂ ಕರ್ನಾಟಕದ ಮೈಸೂರು 3 ಸ್ಥಾನ ಪಡೆದಿವೆ.

10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಸ್ವಚ್ಛ ನಗರವಾಗಿ ಗುಜರಾತ್‌ನ ಅಹಮದಾಬಾದ್‌ ಹೊರಹೊಮ್ಮಿದೆ. ಛತ್ತೀಸಗಢದ ರಾಯ್ ಪುರ, ಮಹಾರಾಷ್ಟ್ರದ ನವಿ ಮುಂಬೈ, ಮಧ್ಯಪ್ರದೇಶದ ಜಬಲ್ಪುರ, ಗುಜರಾತ್‌ನ ಸೂರತ್‌ ನಂತರದ ಸ್ಥಾನದಲ್ಲಿವೆ.

ಸೂಪರ್ ಲೀಗ್ ವಿಭಾಗವು ಹೊಸದಾಗಿ ಸೇರ್ಪಡೆಯಾಗಿದೆ. 2024 ರ ಜನವರಿಯಲ್ಲಿ ಘೋಷಿಸಲಾದ ಈ ಪ್ರಶಸ್ತಿಗಳ ಹಿಂದಿನ ಆವೃತ್ತಿಯಲ್ಲಿ, ಇಂದೋರ್ ಸತತ 7ನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿತು. ಸೂರತ್ ಜಂಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಪ್ಲೇಗ್ ಪೀಡಿತ ನಗರ ಎಂಬ ತನ್ನ ಹಿಂದಿನ ಪರಂಪರೆಯನ್ನು ಅಳಿಸಿಹಾಕಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೇಂದ್ರದ ಸ್ವಚ್ಛ ಭಾರತ ಮಿಷನ್-ನಗರದ ಅಡಿಯಲ್ಲಿ ಆಯೋಜಿಸಲಾಗಿದೆ. ಇದನ್ನು ಸರ್ಕಾರವು ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಮತ್ತು ಸ್ವಚ್ಛತಾ ಸಮೀಕ್ಷೆ ಎಂದು ಪ್ರಚಾರ ಮಾಡಿದೆ.

ಗುರುವಾರ ನಡೆದ ಕಾರ್ಯಕ್ರಮದ ಭಾಗವಾಗಿ ಒಟ್ಟು 78 ಪ್ರಶಸ್ತಿಗಳನ್ನು ಘೋಷಿಸಲಾಯಿತು. ಇದರಲ್ಲಿ ಖಟ್ಟರ್, ಅವರ ಕಿರಿಯ ಸಹೋದ್ಯೋಗಿ ತೋಖನ್ ಸಾಹು ಮತ್ತು ಕಾರ್ಯದರ್ಶಿ ಶ್ರೀನಿವಾಸ್ ಕೆ. ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *