ದೇಶದಲ್ಲಿನ ಚಿಲ್ಲರೆ ಹಣದುಬ್ಬರ ಕಳೆದ 8 ವರ್ಷಗಳಲ್ಲೇ ಕನಿಷ್ಠ ಶೇ.1.55ಕ್ಕೆ ಇಳಿಕೆಯಾಗಿದೆ.
ಜುಲೈ 2025 ರಲ್ಲಿ ಶೇ. 1.55ಕ್ಕೆ ತೀವ್ರವಾಗಿ ಇಳಿದಿದ್ದು, ಕಳೆದ ಜೂನ್ನಲ್ಲಿ ಶೇ. 2.10 ರಷ್ಟಿದ್ದ ಚಿಲ್ಲರೆ ಹಣದುಬ್ಬರ 55 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆಯಾಗಿದೆ. ಇದು ಜೂನ್ 2017 ರ ನಂತರ ದಾಖಲಾದ ಅತ್ಯಂತ ಕಡಿಮೆ ಚಿಲ್ಲರೆ ಹಣದುಬ್ಬರ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ತರಕಾರಿ ಬೆಲೆಗಳು ಸೇರಿದಂತೆ ಆಹಾರ ಪದಾರ್ಥಗಳಲ್ಲಿನ ತೀವ್ರ ಬೆಲೆ ಕುಸಿತ ಚಿಲ್ಲರೆ ಹಣದುಬ್ಬರ ಕಳೆದ ಎಂಟು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಲು ಕಾರಣವಾಗಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಆಧಾರಿತ ಹಣದುಬ್ಬರ ಪ್ರಮಾಣವು ಜೂನ್ ನಲ್ಲಿ ಶೇ. 2.1 ರಷ್ಟು ಇತ್ತು. ಜುಲೈನಲ್ಲಿ 1.55 ರಷ್ಟು ಹಣದುಬ್ಬರವನ್ನು ದಾಖಲಿಸಿದೆ.
2017 ರ ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ. 1.46 ರಷ್ಟು ಇತ್ತು. ಅದರ ನಂತರ ಇದೇ ಮೊದಲ ಬಾರಿಗೆ ಕನಿಷ್ಠ ಪ್ರಮಾಣದ ಚಿಲ್ಲರೆ ಹಣದುಬ್ಬರ ದಾಖಲಾಗಿದೆ.