ಪಹಲ್ಗಾಂನಲ್ಲಿ ಉಗ್ರರ ದಾಳಿಯ ಬಳಿಕ ಪಾಕಿಸ್ತಾನದ ಉಗ್ರಮುಖವಾಡವನ್ನು ಕಳಚುವ ಪ್ರಯತ್ನವಾಗಿ ಭಾರತವು ವಿದೇಶಿಗಳಿಗೆ ಸರ್ವಪಕ್ಷ ನಿಯೋಗ ಕಳಿಸಿದ್ದು, ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ನಿಯೋಗ ಸ್ಪೇನ್‌ಗೆ ಭೇಟಿ ನೀಡಿದೆ.
ಸ್ಪೇನ್‌ನಲ್ಲಿ ಭಾರತದ ರಾಷ್ಟ್ರಭಾಷೆ ಯಾವುದು ಎಂಬ ಪ್ರಶ್ನೆ ಎದುರಾಗಿದ್ದು, ಆಗ ಕನಿಮೋಳಿ ‘ಏಕತೆ ಮತ್ತು ವಿವಿಧತೆ’ ಎಂದು ಸೂಕ್ತ, ಸಶಕ್ತ ಉತ್ತರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ವಲಸಿಗರು, ಸರ್ವಪಕ್ಷ ನಿಯೋಗಕ್ಕೆ ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂದು ಪ್ರಶ್ನೆ ಕೇಳಿದಾಗ ಪ್ರತಿಕ್ರಿಯಿಸಿದ ಕನಿಮೋಳಿ, ಭಾರತದ ರಾಷ್ಟ್ರೀಯ ಭಾಷೆ ಏಕತೆ ಮತ್ತು ವೈವಿಧ್ಯತೆ. ಈ ನಿಯೋಗವು ಜಗತ್ತಿಗೆ ನೀಡುವ ಸಂದೇಶ ಇದಾಗಿದ, ಇದು ಇಂದಿನ ಅತ್ಯಂತ ಮುಖ್ಯವಾದ ವಿಷಯ ಎಂದಿದ್ದಾರೆ.
ಭಯೋತ್ಪಾದನೆಗೆ ಸಂಬಂಧಿಸಿದ ಪ್ರಶ್ನೆಗೆ, ನಮ್ಮ ದೇಶದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿವೆ. ಆದರೆ ಭಯೋತ್ಪಾದನೆಯಿಂದ ಬೇರೆಡೆ ಗಮನ ಹರಿಸುವಂತಾಗಿದೆ. ನಾವು ಭಯೋತ್ಪಾದನೆಯನ್ನು ಎದುರಿಸಬೇಕಾಗಿದೆ, ಯುದ್ಧವು ಅನಗತ್ಯ. ಭಾರತೀಯರಾಗಿ ನಾವು ಭಾರತ ಸುರಕ್ಷಿತವಾಗಿದೆ ಎಂಬ ಸಂದೇಶ ಸಾರಬೇಕಿದೆ ಎಂದರು.
ಕಾಂಗ್ರೆಸ್ ಸೇರಿ ಇಂಡಿಯಾ ಕೂಟದ 16 ವಿಪಕ್ಷಗಳು ಆಪರೇಷನ್ ಸಿಂದೂರ ಕುರಿತ ಚರ್ಚೆಗೆ ಸಂಸತ್ ವಿಶೇಷ ಅಧಿವೇಶನ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿವೆ.