Menu

ಭಾರತದ ವರ್ತಕರಿಂದ ಟರ್ಕಿಶ್ ಆಭರಣಗಳ ಬ್ಯಾನ್‌

ಭಾರತದ  ಆಭರಣ ವರ್ತಕರು ಟರ್ಕಿಶ್ ಆಭರಣಗಳನ್ನು ಬ್ಯಾನ್‌ ಮಾಡಿದ್ದು, ಸಂಗ್ರಹದಲ್ಲಿರುವ ಟರ್ಕಿಶ್‌ ಆಭರಣಗಳಿಗೆ ‘ಸಿಂಧೂರ್’ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿದಾಗ ಟರ್ಕಿ ಮತ್ತು ಅಜರ್‌ಬೈಜಾನ್ ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದವು. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಟರ್ಕಿಯ ಉತ್ಪನ್ನಗಳು ಮತ್ತು ಪ್ರವಾಸೋದ್ಯಮಕ್ಕೆ ಬಹಿಷ್ಕಾರ ಶುರುವಾಗಿದೆ.

ಟರ್ಕಿಯಿಂದ ಭಾರತಕ್ಕೆ ಆಮದಾಗುವ ಸೇಬು, ಅಮೃತಶಿಲೆ ಸೇರಿದಂತೆ ಹಲವು ಉತ್ಪನ್ನಗಳನ್ನು ಈಗಾಗಲೇ ಬಹಿಷ್ಕರಿಸಲಾಗಿದೆ. ಈಗ ಭಾರತದ ಆಭರಣ ವರ್ತಕರು ಟರ್ಕಿಯಿಂದ ಆಮದಾಗುವ ಆಭರಣಗಳ ಖರೀದಿ, ಮಾರಾಟ ಮತ್ತು ಪ್ರದರ್ಶನಕ್ಕೆ ಬಹಿಷ್ಕಾರ ಘೋಷಿಸಿದ್ದಾರೆ. ಕಿವಿಯೋಲೆಗಳು ಮತ್ತು ನೆಕ್ಲೇಸ್‌ನಂತಹ ದೊಡ್ಡ ಗಾತ್ರದ ಆಭರಣಗಳಿಗೆ ಬಳಸಲಾಗುತ್ತಿದ್ದ ‘ಟರ್ಕಿಶ್’ ಟ್ಯಾಗ್‌ಗೆ ಬದಲಾಗಿ ‘ಸಿಂಧೂರ್’ ಎಂಬ ಹೆಸರನ್ನು ನೀಡಲು ಚಿಂತನೆ ನಡೆಸಿದ್ದಾರೆ.

ರತ್ನ ಮತ್ತು ಆಭರಣ ಮಂಡಳಿಯ ಅಧ್ಯಕ್ಷ ರಾಜೇಶ್ ರೋಕ್ಡೆ ಅವರು, ಟರ್ಕಿಶ್ ಆಭರಣಗಳನ್ನು ಇನ್ನು ಮುಂದೆ ಭಾರತದಲ್ಲಿ ‘ಸಿಂಧೂರ್ ಆಭರಣ’ ಎಂದು ಕರೆಯಲಾಗುತ್ತದೆ. ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಟರ್ಕಿಶ್ ಆಭರಣಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ, ಭಾರತದಲ್ಲಿ ತಯಾರಾದ ಆಭರಣಗಳನ್ನು ಟರ್ಕಿಶ್ ಬ್ರಾಂಡ್‌ನಡಿ ಮಾರಾಟ ಮಾಡಲಾಗುತ್ತಿತ್ತು. ಈಗ ಈ ಟ್ಯಾಗ್‌ಗೆ ಬದಲಾಗಿ ‘ಸಿಂಧೂರ್’ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿದೆ. ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದಂತೆ ಟರ್ಕಿಯ ನಿಲುವಿನಿಂದ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಭಾರತೀಯರು ಟರ್ಕಿಯ ಪ್ರವಾಸೋದ್ಯಮವನ್ನು ರದ್ದುಗೊಳಿಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *