ನವದೆಹಲಿ: ಭಾರತೀಯ ಯುದ್ಧ ನೌಕೆಗಳು ಅರಬ್ಬಿ ಸಮುದ್ರದಲ್ಲಿ ದೂರಗಾಮಿ ನೌಕೆಗಳನ್ನು ಹೊಡೆದುರುಳಿಸುವ ತರಬೇತಿಯನ್ನು ನಡೆಸಿವೆ.
ರಾಷ್ಟ್ರದ ಭದ್ರತೆ ಕುರಿತು ನೌಕಾಪಡೆ ತಮ್ಮ ಬಳಿ ಇರುವ ಯುದ್ಧ ನೌಕೆಗಳ ಸಾಮರ್ಥ್ಯವನ್ನು ಹಲವು ರೀತಿಯಲ್ಲಿ ಪರೀಕ್ಷೆ ನಡೆಸಿತು. ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ನೆಲದಿಂದ ನೆಲದ ಮೇಲೆ ದಾಳಿ ನಡೆಸುವ ಬ್ರಹ್ಮೋಸ್ ನಿಗ್ರಹ ನೌಕೆ, ಕೋಲ್ಕತಾ ಕ್ಲಾಸ್ ವಿಧ್ವಂಸಕ, ನೀಲಗಿರಿ ಮತ್ತು ಕ್ರಿವಾಕ್ ಕ್ಲಾಸ್ ಫೈಟರ್ಸ್ ನೌಕೆಗಳಿಂದ ಸಮರಭ್ಯಾಸ ನಡೆಸಲಾಯಿತು.
ಪರೀಕ್ಷೆ ವೇಳೆ ನೌಕೆಗಳು ಯಶಸ್ವಿಯಾಗಿ ಗುರಿ ತಲುಪಿವೆ. ಇದರಿಂದ ನೌಕೆಗಳ ತಾಂತ್ರಿಕ ವ್ಯವಸ್ಥೆ, ಸಿಡಿಮದ್ದುಗಳ ಸಾಮರ್ಥ್ಯ ಮುಂತಾದವುಗಳು ಸುಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ದಾಳಿ ಯತ್ನಗಳನ್ನು ತಡೆಯುವ ಸಾಮರ್ಥ್ಯ ಸಾಬೀತಾಯಿತು.
ಜಮ್ಮು ಕಾಶ್ಮೀರದ ಪಹಲಗ್ಗಾವ್ ನಲ್ಲಿ ಉಗ್ರರುದಾಳಿ ನಡೆಸಿ 26 ಭಾರತದ ಪ್ರವಾಸಿಗರನ್ನು ಹತ್ಯೆಗೈದ ಘಟನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡೂ ದೇಶಗಳ ಸೇನಾಬಲ ಪರೀಕ್ಷೆ ನಡೆಸುತ್ತಿವೆ.