ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲಿಸಿದ ಟರ್ಕಿಗೆ ಭಾರತೀಯ ಚಿತ್ರರಂಗ ಪಾಠ ಕಲಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್‌ನಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ ಭಾರತೀಯ ಚಿತ್ರರಂಗ ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಿದೆ.
ಈ ಎರಡು ದೇಶಗಳ ಜೊತೆ ನಂಟು ಇಟ್ಟುಕೊಳ್ಳದಂತೆ ನಿರ್ದೇಶಕ, ನಿರ್ಮಾಪಕರಿಗೆ ತಿಳಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿ ಜೊತೆ ನಂಟು ಇಟ್ಟುಕೊಂಡರೆ ಭಾರತದ ಭದ್ರತೆ ತೊಂದರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಪಾಕ್ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬ್ಯಾನ್ ಮಾಡಲಾಗಿದೆ.
ಭಾರತದ ವಿರುದ್ಧದ ಪಾಕಿಸ್ತಾನಕ್ಕೆ 350 ಡ್ರೋನ್ ಸರಬರಾಜು ಮಾಡಿದ್ದ ಟರ್ಕಿ, ಡ್ರೋನ್ ಬಳಕೆ ಬಗ್ಗೆ ಪಾಕ್ ಸೈನಿಕರಿಗೆ ತರಬೇತಿ, ಮಿಲಿಟರಿ ಯಂತ್ರೋಪ ಕರಣಗಳ ನೆರವು ನೀಡಿರುವ ಸಂಗತಿ ಬಹಿರಂಗವಾಗಿದೆ. ಕಾರ್ಯಾಚರಣೆ ವೇಳೆ ಯಂತ್ರೋಪಕರಣಗಳ ಬಳಕೆಗೆ ತನ್ನ ಸಿಬ್ಬಂದಿಯನ್ನೂ ಟರ್ಕಿ ಕಳುಹಿಸಿದ್ದು, ಟರ್ಕಿಯ ಇಬ್ಬರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಭಾರತದ ಮೇಲಿನ ದಾಳಿಗೆ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿದ್ದ ಟರ್ಕಿ ಸಲಹೆಗಾರರು, ಎತ್ತರದ ಪ್ರದೇಶದಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ಕೇಂದ್ರೀಕರಿಸುವಂತೆ ಪಾಕ್ ಸೇನಾ ದಂಡ ನಾಯಕರಿಗೆ ಮಾಹಿತಿ ನೀಡಿದ್ದರು ಟರ್ಕಿಯ ‘ಅಸಿಸ್ಗಾರ್ಡ್ ಸೊಂಗರ್’ ಡ್ರೋನ್ ಜತೆಗೆ ‘ಬೇರಕ್ತಾರ್ ಟಿಬಿ2’, ಮತ್ತು ‘ಯಿಹಾ’ ಡ್ರೋನ್‌ಗಳನ್ನು ಪಾಕಿಸ್ತಾನ ಬಳಸಿಕೊಂಡು ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.