ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಲೇಷ್ಯಾ ಭೇಟಿ ವೇಳೆ ಮಲೇಷ್ಯಾದಲ್ಲಿ ಭಾರತೀಯ ರಾಯಭಾರ ಕಚೇರಿ ತೆರೆಯುವುದು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಕ್ಷೇತ್ರಗಳಲ್ಲಿ ಉಭಯದೇಶಗಳ ಸಹಕಾರದೊಂದಿಗೆ ಹಲವು ಉಪಕ್ರಮಗಳನ್ನು ಘೋಷಿಸಲಾಗಿದೆ.
ಪ್ರಧಾನಿ ಮೋದಿ ಅಲ್ಲಿಯ ಪ್ರಧಾನಿ ದಾತು ಸೆರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಮಾತುಕತೆ ನಡೆಸಿ ಕೆಲವು ಉಪಕ್ರಮಗಳನ್ನು ಪ್ರಕಟಿಸಿದರು. ಅವುಗಳು ಹೀಗಿವೆ, ಮಲೇಷ್ಯಾದಲ್ಲಿ ಭಾರತೀಯ ರಾಯಭಾರ ಕಚೇರಿ ತೆರೆಯಲಾಗುವುದು. ಮಲೇಷ್ಯಾದ ಪೇಮೆಂಟ್ ಸಿಸ್ಟಂ ಮತ್ತು ಭಾರತದ ಯುಪಿಐ ಪೇಮೆಂಟ್ ಸಿಸ್ಟಂಗಳ ಹೊಂದಿಕೆ ಮಾಡಲಾಗುವುದು. ಭಾರತೀಯರು ಮಲೇಷ್ಯಾಗೆ ಹೋದರೆ ಯುಪಿಐ ಮೂಲಕ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ. ಸಿಂಗಾಪುರ ಇತ್ಯಾದಿ ಕೆಲವುಶಗಳಲ್ಲಿ ಈ ರೀತಿ ಹೊಂದಾಣಿಕೆ ವ್ಯವಸ್ಥೆ ಮಾಡಲಾಗಿದೆ.
ವಿಪತ್ತು ನಿರ್ವಹಣೆಗೆ ಎರಡೂ ದೇಶಗಳ ಮಧ್ಯೆ ಎಂಒಯು ಒಪ್ಪಂದ ಆಗಿದ್ದು, ಭ್ರಷ್ಟಾಚಾರ ನಿಗ್ರಹಕ್ಕಾಗಿ ಎರಡೂ ದೇಶಗಳ ಮಧ್ಯೆ ಸಹಕಾರ ಒಪ್ಪಂದಕ್ಕೆ ಸಮ್ಮತಿಸಲಾಗಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ. ಇದರಿಂದ ಸಪ್ಲೈ ಚೈನ್ ಬಲಪಡಿಸಲುಅನುಕೂಲವಾಗಲಿದೆ. ವಿಶ್ವಸಂಸ್ಥೆ ಶಾಂತಿಪಾಲನೆ ಸಹಕಾರ ವಿಚಾರದಲ್ಲಿ ಭಾರತ ಮತ್ತು ಮಲೇಷ್ಯಾ ಸರ್ಕಾರಗಳ ನಡುವೆ ಪತ್ರ ವಿನಿಮಯ. ಮಲೇಷ್ಯಾದಲ್ಲಿ ಇರುವ ಭಾರತೀಯ ಪ್ರಜೆಗಳಿಗೆ ಇನ್ಷೂರೆನ್ಸ್ ಸೌಲಭ್ಯ ಒದಗಿಸಲು ಇಎಸ್ಐಸಿ ಮತ್ತು ಪೆರ್ಕೆಸೋ ನಡುವೆ ಸಹಕಾರ ಒಪ್ಪಂದಕ್ಕೆ ಬರಲಾಗಿದೆ.
ಭಾರತ ಮತ್ತು ಮಲೇಷ್ಯಾಗಳ ರಾಷ್ಟ್ರೀಯ ಭದ್ರತಾ ಮಂಡಳಿಗಳ ಮಧ್ಯೆ ಸಹಕಾರ, ಆರೋಗ್ಯ ಮತ್ತು ಔಷಧ ಕ್ಷೇತ್ರಗಳಲ್ಲಿ ಸಹಕಾರ, ಮಲಯ ಯೂನಿವರ್ಸಿಟಿಯಲ್ಲಿ ತಿರುವಳ್ಳರ್ ಕೇಂದ್ರ ಸ್ಥಾಪನೆಗೆ ಕ್ರಮ, ಮಲೇಷ್ಯಾದ ಸೈಬರ್ಜಯಾ ಯೂನಿವರ್ಸಿಟಿ ಮತ್ತು ಆಯುರ್ವೇದ ತರಬೇತಿ, ಸಂಶೋಧನಾ ಸಂಸ್ಥೆಯಾದ ಐಟಿಆರ್ಎ ನಡುವೆ ಎಂಒಯು ಒಪ್ಪಂದ ಮಾಡಲಾಗಿದೆ.


