Menu

ಡಾಲರ್‌ ಎದುರು 94 ರೂ.ಗಳಿಗಿಂತ ಕೆಳಗೆ ಕುಸಿದ ಭಾರತ ಕರೆನ್ಸಿ

ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿಯ ಮೌಲ್ಯ 94 ರೂ.ಗಳಿಗಿಂತ ಕೆಳಗೆ ಕುಸಿದಿದೆ. ಸೋಮವಾರ (ಮಾ. 23) ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ 93.83ರಲ್ಲಿ ಆರಂಭಗೊಂಡು ಬಳಿಕ 94 ಮಟ್ಟ ದಾಟಿದೆ.

ಕಚ್ಛಾ ತೈಲ ಬೆಲೆ ಏರಿಕೆ ಭಾರತದ ಆಮದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ಆಮದು ಹೆಚ್ಚಾದಾಗ ಡಾಲರ್​ಗೆ ಬೇಡಿಕೆ ಹೆಚ್ಚಿ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದಿದೆ. ವಿದೇಶಿ ಹೂಡಿಕೆದಾರರುಭಾರತದ ಮಾರುಕಟ್ಟೆಯಲ್ಲಿನ ಷೇರುಗಳು, ಬಾಂಡ್​ಗಳು ಇತ್ಯಾದಿಯನ್ನು ಮಾರುತ್ತಿರುವುದು ಹೆಚ್ಚಿದೆ. ಹೀಗೆ ಮಾರುವಾಗ ರೂಪಾಯಿಯನ್ನು ಡಾಲರ್​ಗಳಾಗಿ ಪರಿವರ್ತಿಸುತ್ತಾರೆ. ಅಮೆರಿಕದ ಡಾಲರ್​ಗೆ ಬೇಡಿಕೆ ಹೆಚ್ಚಿ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗುತ್ತಿದೆ. ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ಇದ್ದಾಗ ಹೂಡಿಕೆದಾರರು ರೂಪಾಯಿ ಕರೆನ್ಸಿಗಳ ಬದಲು ಡಾಲರ್ ಇಟ್ಟುಕೊಳ್ಳುವ ಪರಿಪಾಠವಿದೆ. ಇದು ಡಾಲರ್​ಗಿರುವ ಬೇಡಿಕೆಯನ್ನು ಹೆಚ್ಚಿಸುತ್ತದೆ.

ಅಮೆರಿಕದ ಆರ್ಥಿಕ ದಿಗ್ಬಂಧನದ ಫಲವಾಗಿ ಇರಾನ್​ನ ರಿಯಾಲ್ ಕರೆನ್ಸಿಯ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದೆ. ಇರಾನ್ ದೇಶವು 10 ಮಿಲಿಯನ್ ರಿಯಾಲ್ ಬ್ಯಾಂಕ್ ನೋಟೊಂದನ್ನು ಬಿಡುಗಡೆ ಮಾಡಿದೆ. 10 ಮಿಲಿಯನ್ ಎಂದರೆ ಒಂದು ಕೋಟಿ ರಿಯಾಲ್ ಮುಖಬೆಲೆಯ ನೋಟು. ಒಂದು ಕೋಟಿ ರಿಯಾಲ್ ನೋಟಿನ ಮೌಲ್ಯ ಏಳು ಡಾಲರ್ ಮಾತ್ರ. ಭಾರತೀಯ ಕರೆನ್ಸಿಯಲ್ಲಿ 650 ರೂಪಾಯಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಚೀನೀ ಯುವಾನ್ ಕರೆನ್ಸಿಗೆ ಎರಡು ಲಕ್ಷ ಇರಾನಿ ರಿಯಾಲ್ ಸಿಗುತ್ತದೆ ಭಾರತೀಯ ರುಪಾಯಿಯ ಮೌಲ್ಯ 14,000 ರಿಯಾಲ್​ಗೆ ಸಮವಿದೆ.

Related Posts

Leave a Reply

Your email address will not be published. Required fields are marked *