ಶ್ರೀನಗರ: ಪಾಕಿಸ್ತಾನದಿಂದ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಲು 100ಕ್ಕೂ ಅಧಿಕ ಬಾರಿ ಸಹಾಯ ಮಾಡಿದ್ದ `ಮಾನವ ಜಿಪಿಎಸ್’ ಎಂದೇ ಖ್ಯಾತಿ ಪಡೆದಿದ್ದ ಉಗ್ರ ಬಾಗು ಖಾನ್ ನನ್ನು ಭಾರತೀಯ ಸೇನೆ ಜಮ್ಮು ಕಾಶ್ಮೀರದಲ್ಲಿ ಎನ್ ಕೌಂಟರ್ ಮಾಡಿದೆ.
1995ರಿಂದ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ನೆಲೆಸಿದ್ದ ಬಾಗು ಖಾನ್ ಅಲಿಯಾಸ್ ಸಮಂದಾರ್ ಚಾಚಾ ಅತ್ಯಂತ ಹಳೆಯ ಹಾಗು ಉಗ್ರರು ಭಾರತದೊಳಗೆ ನುಸುಳಲು ಯಶಸ್ವಿ ಮಾರ್ಗಗಳನ್ನು ಹುಡುಕಿಕೊಡುತ್ತಿದ್ದ.
ನೌಶೇರಾ ಪ್ರದೇಶದಲ್ಲಿ ಗುರೆಜ್ ನಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಬಾಗೂ ಖಾನ್ ಹಾಗೂ ಆತನ ಸಹಾಯಕ ಮತ್ತೊಬ್ಬ ಉಗ್ರರನ್ನು ಹೊಡೆದುರುಳಿಸಿದೆ.
ಗುರೆಜ್ ಸೇರಿದಂತೆ ಜಮ್ಮು ಕಾಶ್ಮೀರದ ಜಾಗಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಬಾಗೂ ಖಾನ್, ಭಾರತದೊಳಗೆ ನುಸುಳಲು ರಹಸ್ಯ ಮಾರ್ಗಗಳನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದ. ಈ ಮೂಲಕ ಪಾಕಿಸ್ತಾನದ ಹಲವು ಉಗ್ರ ಸಂಘಟನೆಗಳಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ.