ನವದೆಹಲಿ: ಭಾರತೀಯ ಸೇನೆ ಮಂಗಳವಾರ ತಡರಾತ್ರಿ ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ಪಂಜಾಬ್ ಪ್ರಾಂತ್ಯದ ಮೇಲೆ ನಡೆಸಿದ `ಆಪರೇಷನ್ ಸಿಂಧೂರ’ದ 25 ನಿಮಿಷ ಕಾರ್ಯಾಚರಣೆಯ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ಉಗ್ರರ ವಿರುದ್ದ 2 ವಾರಗಳಲ್ಲೇ ಪ್ರತೀಕಾರ ಕ್ರಮ ಆರಂಭಿಸಿದ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ.
ಮಂಗಳವಾರ ತಡರಾತ್ರಿ 1.05 ನಿಮಿಷದಿಂದ 1.30 ನಿಮಿಷದವರೆಗೆ ಭಾರತದ ಭೂಸೇನೆ, ವಾಯು ಮತ್ತು ನೌಕಾಪಡೆಗಳು ಉಗ್ರರ 9 ನೆಲೆಗಳ ಮೇಲೆ ವಾಯು ದಾಳಿ ನಡೆಸಿದ್ದು, ಸುಮಾರು 25 ನಿಮಿಷಗಳ ಕಾಲ ಸತತವಾಗಿ ಗುಂಡಿನ ಮಳೆಗೆರೆದಿದೆ.
ಭಾರತದ ದಾಳಿಯಲ್ಲಿ ಯಾವುದೇ ಪ್ರಮುಖ ಉಗ್ರರು ಮೃತಪಟ್ಟಿಲ್ಲವಾದರೂ ಉಗ್ರರ ಮೂಲಭೂತ ಸೌಕರ್ಯ ಹಾಗೂ ಅವರ ಕುಟುಂಬದೆ ಸದಸ್ಯರು ಸೇರಿದಂತೆ 70 ಮಂದಿಯನ್ನು ಬಲಿ ಪಡೆದಿದೆ.
ಭಾರತ ಸ್ಪಷ್ಟವಾಗಿ ಗುರುತಿಸಿದ 9 ಉಗ್ರರ ನೆಲೆಗಳ ಮೇಲೆ 25 ನಿಮಿಷ ಸತತ ದಾಳಿ ನಡೆಸಿದ್ದು, 24 ಬಾಂಬ್ ಗಳ ಸುರಿಮಳೆ ಸುರಿಸಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರೀ ಬುಧವಾರ ಮಾಧ್ಯಮದವರಿಗೆ ಕಾರ್ಯಾಚರಣೆಯ ವಿವರಗಳನ್ನು ನೀಡಿದ್ದು, ಸುದ್ದಿಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೊಮಿಕಾ ಸಿಂಗ್ ಉಪಸ್ಥಿತರಿದ್ದರು.
ಕಳೆದ 30 ವರ್ಷಗಳಿಂದ ಪಾಕಿಸ್ತಾನ ಉಗ್ರರಿಗೆ ನೀಡಿದ್ದ ಮೂಲಸೌಕರ್ಯ ಒದಗಿಸುತ್ತಿದ್ದವು. ಇದರಲ್ಲಿ ತರಬೇತಿ, ಯುವಕರ ನೇಮಕಾತಿ, ದಾಳಿಯ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ ಎಂದರು.
ಮುಫಾಜಾಬಾದ್, ಬವಾಲ್ಪುರ್, ರಾವಲ್ಕೋಟ್, ಚಕ್ಸವರಿ, ನೀಲಂ ಕಣಿವೆ, ಬಿಂಬೇರ್, ಜೆಲುಮ್ ಮತ್ತು ಚಕ್ವಾಲ್ ಗಳನ್ನು ಗುಪ್ತಚರ ಇಲಾಖೆಗಳು ಹಲವು ವರ್ಷಗಳಿಂದ ಉಗ್ರರ ಪ್ರಮುಖ ನೆಲೆಗಳು ಎಂದು ಮಾಹಿತಿ ನೀಡುತ್ತಾ ಬಂದಿವೆ. ಈ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಭಾರತದ ಮೇಲೆ ಹಲವು ವರ್ಷಗಳಿಂದ ನಡೆಯುತ್ತಿರುವ ದಾಳಿಗಳ ಹಿಂದೆ ಲಷ್ಕರೆ0ಇ –ತೋಯ್ಬಾ ಮತ್ತು ಜೈಷೆ-ಿ- ಮೊಹಮದ್ ಸಂಘಟನೆಗಳ ಕೈವಾಡವಿದ್ದು, ಈ ಎರಡೂ ಗುಂಪುಗಳಿಗೆ ಸೇರಿದ ಉಗ್ರರ ಶಿಬಿರಗಳು ಇದಾಗಿದ್ದವು ಎಂದು ಸೋಫಿಯಾ ಖುರೇಷಿ ತಿಳಿಸಿದರು.
ಭಾರತ ದಾಳಿ ಮಾಡಿದ 9 ಪ್ರದೇಶಗಳ ಪೈಕಿ 5 ಪಾಕ್ ಆಕ್ರಮಿತ ಜಮ್ಮು ಕಾಶ್ಮೀರಕ್ಕೆ ಸೇರಿದ್ದಾಗಿದೆ. ಉಳಿದ ನಾಲ್ಕು ಪಾಕಿಸ್ತಾನದ ಬಾವಲಪುರ್ ನಲ್ಲಿವೆ ಎಂದು ಹೇಳಿದರು.