ಭಯೋತ್ಪಾದನಾ ಚಟುವಟಿಕೆ ಕಾರಣಕ್ಕಾಗಿ 2026ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸಂಭವಿಸಬಹುದು ಎಂದು ಅಮೆರಿಕ ಚಿಂತಕರ ಚಾವಡಿ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಮೇಲೆ ಭಾರತ ಮೇ ತಿಂಗಳಲ್ಲಿ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ರಾಜೀ ಸಂಧಾನ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ವಿದೇಶಾಂಗ ಸಚಿವಾಲಯದ ಮಾಹಿತಿ ಆಧರಿಸಿ ಚಿಂತಕರ ಚಾವಡಿ ವರದಿ ಮಾಡಿದೆ.
ಡೆಮಾಕ್ರೆಟಿಕ್ ರಿಪಬ್ಲಿಕ್ ಕಾಂಗೊ, ಗಾಜಾ ದಾಳಿ ಮತ್ತು ಉಕ್ರೇನ್ ಮತ್ತು ರಷ್ಯಾ ಯುದ್ಧಗಳನ್ನು ನಿಲ್ಲಿಸುವ ಪ್ರಯತ್ನ ಮಾಡಿದ ಅಮೆರಿಕ ಹಲವಾರು ಯುದ್ಧ ಅವಕಾಶಗಳನ್ನು ನಿಲ್ಲಿಸಿದೆ. ಮೇ ತಿಂಗಳಲ್ಲಿ ನಡೆದ ಮೂರು ದಿನಗಳ ಕಿರು ಯುದ್ಧವನ್ನು ದಿಢೀರನೆ ನಿಲ್ಲಿಸಲಾಗಿತ್ತು. ಅಮೆರಿಕ ಈ ಯುದ್ಧವನ್ನು ತೆರಿಗೆ ವಿಧಿಸುವ ಎಚ್ಚರಿಕೆ ನೀಡಿ ನಿಲ್ಲಿಸಿದ್ದೇವೆ ಎಂದು ಪದೇಪದೆ ಹೇಳಿಕೊಂಡಿತು. ಡೊನಾಲ್ಡ್ ಟ್ರಂಪ್ ಸುಮಾರು 70 ಬಾರಿ ಸಾರ್ವನಿಕವಾಗಿ ಈ ವಿಷಯ ಹೇಳಿಕೊಂಡಿದ್ದರೂ ಭಾರತ ನಿರಾಕರಿಸುತ್ತಲೇ ಬಂದಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಭಾರತ ೧೦೦ ಭಯೋತ್ಪಾದಕರನ್ನು ಹತ್ಯೆಗೈದಿದ್ದಾಗಿ ಹೇಳಿಕೊಂಡಿದ್ದು, ಪಾಕಿಸ್ತಾನದ ಹಲವು ವಾಯುನೆಲೆಗಳನ್ನು ಹಾನಿಗೊಳಪಡಿಸಿತ್ತು. ಇದೇ ವೇಳೆ ಭಾರತದ ೬ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು.


