Menu

ಪೆಟ್ರೋಲ್, ಎಲ್‌ಪಿಜಿ ಸೇರಿ ಅಗತ್ಯ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನ, ಇಂಧನ ಕೊರತೆಯಿಲ್ಲವೆಂದ ಐಒಸಿಎಲ್‌

ಉತ್ತರ ಭಾರತದಲ್ಲಿ ಜನರು ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದ ಆತಂಕಗೊಂಡು ಪೆಟ್ರೋಲ್, ಡೀಸಲ್, ಮತ್ತು ಎಲ್‌ಪಿಜಿ ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.

ಪಂಜಾಬ್‌ನ ಗಡಿಭಾಗದ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶಾದ್ಯಂತ ಇಂಧನ ಸಂಗ್ರಹ ಸಾಕಷ್ಟಿದೆ. ಸರಬರಾಜು ವ್ಯವಸ್ಥೆ ಸಮರ್ಪಕವಾಗಿ  ಕಾರ್ಯನಿರ್ವಹಿಸುತ್ತಿದೆ. ಜನರು ಗಾಬರಿಯಿಂದ ಇಂಧನ ಖರೀದಿಗೆ ಧಾವಿಸುವ ಅಗತ್ಯವಿಲ್ಲ. ನಮ್ಮ ಎಲ್ಲಾ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸಲ್, ಮತ್ತು ಎಲ್‌ಪಿಜಿ ಲಭ್ಯವಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ.

ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮತ್ತು ರಾಜಸ್ಥಾನದ ಗಡಿಭಾಗದ ಪ್ರದೇಶಗಳಲ್ಲಿ ಪಾಕಿಸ್ತಾನವು ಕ್ಷಿಪಣಿ, ಡ್ರೋನ್, ಮತ್ತು ಶೆಲ್ ದಾಳಿಗಳನ್ನು ನಡೆಸುತ್ತಿ ರುವುದರಿಂದ ಸ್ಥಳೀಯ ಜನರಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿದೆ. ಪಂಜಾಬ್‌ನ ಗಡಿಯ ಹಳ್ಳಿಗಳಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಜನರ ದೊಡ್ಡ ಗುಂಪು ಕಾಣಿಸಿ ಕೊಂಡಿದೆ, ಇದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ದೇಶದ ಸರಬರಾಜು ವ್ಯವಸ್ಥೆಯು ಸಾಕಷ್ಟು ಇಂಧನವನ್ನು ಹೊಂದಿದ್ದು, ಎಲ್ಲಾ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸಲ್, ಮತ್ತು ಎಲ್‌ಪಿಜಿ ಲಭ್ಯವಿದೆ ಎಂದು ಖಾತರಿಪಡಿಸಿರುವ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಜನರಿಗೆ ಶಾಂತವಾಗಿರಲು ಮತ್ತು ಗಾಬರಿಯಿಂದ ಖರೀದಿಗೆ ಧಾವಿಸದಂತೆ ಕೋರಿದೆ.    ಸರ್ಕಾರವೂ ತಪ್ಪು ಮಾಹಿತಿಗಳಿಗೆ ಕಿವಿಗೊಡದಂತೆ ಮತ್ತು ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದೆ.

Related Posts

Leave a Reply

Your email address will not be published. Required fields are marked *