Sunday, September 07, 2025
Menu

ಜೆನೆರಿಕ್‌ ಮೆಡಿಸಿನ್‌ ಪೂರೈಕೆ ಬಂದ್‌ ಮಾಡಿದ ಭಾರತ: ಹೈರಾಣಾದ ಪಾಕ್‌ ವೈದ್ಯ ವಲಯ

ಇಸ್ಲಾಮಾಬಾದ್‌: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಭಾರತವು ಪಾಕಿಸ್ತಾನದೊಂದಿಗಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ ಬಳಿಕ ಪಾಕ್‌ ವಿರುದ್ಧ ಪ್ರತೀಕಾರಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ಸಶಸ್ತ್ರ ಪಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿರುವ ಮಧ್ಯೆಯೇ ಆ ದೇಶದಲ್ಲಿ ಅಗತ್ಯ ಔಷಧ ಬಿಕ್ಕಟ್ಟು ತೀವ್ರಗೊಂಡಿದೆ.

ಭಾರತವು ಪಾಕಿಸ್ತಾನಕ್ಕೆ ಅಗತ್ಯ ಔಷಧಗಳ ಸರಬರಾಜು ನಿಲ್ಲಿಸಿರುವುದರಿಂದ ಅಲ್ಲಿನ ವೈದ್ಯರೇ ಕೆಲಸ ಬಿಟ್ಟು ಹೋಗುವ ಯೋಚನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನವು ಭಾರತದ ಜೆನೆರಿಕ್ ಮೆಡಿಸಿನ್ ಮೇಲೆ ಅವಲಂಬಿತವಾಗಿತ್ತು. ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ ಬಳಿಕ ಅನೇಕ ಮಾತ್ರೆಗಳ ತಯಾರಿಸಲು ಕಚ್ಚಾವಸ್ತುಗಳ ಕೊರತೆ ಎದುರಾಗಿದೆ. ಅಲ್ಲಿ ಹಾವು ಕಡಿತಕ್ಕೆ, ಕ್ಯಾನ್ಸರ್‌ಗೆ ಔಷಧವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ವಿಟಮಿನ್-ಡಿ, ವಿಟಮಿನ್ ಬಿ1, ವಿಟಮಿನ್ ಬಿ12, ಮಕ್ಕಳಿಗೆ ಮಾಲ್ ನ್ಯೂಟ್ರೀಷನ್ಸ್ ಎಲ್ಲವೂ ಬಂದ್ ಆಗಿವೆ. ಟರ್ಕಿ, ಯೂರೋಪ್, ಅಮೆರಿಕ, ಚೀನಾ ಬಳಿ ಔಷಧಕ್ಕಾಗಿ ಪಾಕಿಸ್ತಾನ ಅಂಗಲಾಚುತ್ತಿದೆ. ಆದರೆ ನಮ್ಮಲ್ಲಿ ಸಿಗುವಷ್ಟು ಕಡಿಮೆ ದರಕ್ಕೆ ಬೇರೆ ದೇಶಗಳಿಂದ ಪಾಕ್‌ಗೆ ಔಷಧ ಸಿಗುವುದಿಲ್ಲ. ಇದರ ನಡುವೆ ಪಾಕಿಸ್ತಾನದ ನಾಯಕರು ಔಷಧ ವ್ಯಾಪಾರ ನಿಷೇಧದಿಂದ ವಿನಾಯಿತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಏ.22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.

Related Posts

Leave a Reply

Your email address will not be published. Required fields are marked *