ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಒಟ್ಟು 63 ಮಿಲಿಯನ್ ಚಂದಾ ದಾರರನ್ನು ಹೊಂದಿರುವ ಹದಿನಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಗೃಹ ಸಚಿವಾಲಯದ ಶಿಫಾರಸು ಅನ್ವಯ ಭಾರತದಲ್ಲಿ ನಿಷೇಧಿ ಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ನಿಷೇಧಿತ ವೇದಿಕೆಗಳಲ್ಲಿ ಡಾನ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ ಸುದ್ದಿ ಸಂಸ್ಥೆಗಳ ಯೂಟ್ಯೂಬ್ ಚಾನೆಲ್‌ಗಳು ಸೇರಿವೆ. ಈ ಯೂಟ್ಯೂಬ್ ಚಾನೆಲ್‌ಗಳು ಪ್ರಚೋದನಕಾರಿ, ಕೋಮು ಸೂಕ್ಷ್ಮ ವಿಷಯ, ಸುಳ್ಳು, ದಾರಿತಪ್ಪಿಸುವ ಮಾಹಿತಿ ಗಳೊಂದಿಗೆ ಭಾರತದ ಸೇನೆ ವಿರುದ್ಧ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಭಾರತವು ಸಿಂಧು ಜಲ ಒಪ್ಪಂದ ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸ್ಥಗಿತಗೊಳಿಸಿದೆ. ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತ ಗೊಳಿಸುವ ಹಕ್ಕು ಇಸ್ಲಾಮಾಬಾದ್‌ಗೆ ಇದೆ ಎಂದು ಪಾಕ್ ಪ್ರತಿಕ್ರಿಯಿಸಿದೆ.