Menu

ಹಾಲು, ಮೊಸರು, ಕಾಫಿ ಟೀ, ನೀರು, ವಿದ್ಯುತ್‌, ವಾಹನ ಶುಲ್ಕ ದರ ಹೆಚ್ಚಳ, ಕಸಕ್ಕೂ ಕಾಸು

ಬಸ್, ಮೆಟ್ರೋ ಟಿಕೆಟ್‌ ದರ ಹೆಚ್ಚಳದ ಬಳಿಕ ಹಾಲು, ಮೊಸರು, ವಿದ್ಯುತ್‌, ನೀರಿನ ದರ ದುಬಾರಿಯಾಗಿ ಪರಿಣಮಿಸುವ ಜೊತೆಗೆ ಕಸಕ್ಕೂ ನಾಗರಿಕರು  ಸೆಸ್ ಕಟ್ಟಬೇಕಿದೆ.

ಕಸ ಸಂಗ್ರಹ ಸೆಸ್ (ಮಾಸಿಕ)ದರ ಹೀಗಿದೆ, ವಸತಿ ಕಟ್ಟಡ: 600 ಚದರಡಿವರೆಗೆ – 10 ರೂ., 601-1000 ಚದರಡಿ- 50 ರೂ., 1001-2000 ಚದರಡಿ – 100 ರೂ., 2001-3000 ಚದರಡಿ – 150 ರೂ., 3001-4000 ಚದರಡಿ – 200 ರೂ., 4000 ಚದರಡಿ ಮೇಲ್ಪಟ್ಟು – 400 ರೂ.  ವಾಣಿಜ್ಯ ಕಟ್ಟಡ: ನಿತ್ಯ 5ಕೆಜಿವರೆಗೆ – 500 ರೂ. ನಿತ್ಯ 10 ಕೆಜಿವರೆಗೆ – 1400 ರೂ. ನಿತ್ಯ 25 ಕೆಜಿವರೆಗೆ – 3500 ರೂ. ನಿತ್ಯ 50 ಕೆಜಿವರೆಗೆ – 7000 ರೂ., ನಿತ್ಯ 100 ಕೆಜಿವರೆಗೆ – 14000 ರೂ.

ನಂದಿನಿ ಹಾಲು-ಮೊಸರಿನ ಬೆಲೆ ನಾಲ್ಕು ರೂಪಾಯಿ ಹೆಚ್ಚಳ, ಇದರಿಂದ ಹೋಟೆಲ್‌ನಲ್ಲಿ ಕಾಫಿ, ಟೀ ಸದ್ಯದಲ್ಲೇ ಏರಿಕೆ ಸಾಧ್ಯತೆಯಿದೆ. ವಿದ್ಯುತ್‌ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳದ ಜೊತೆಗೆ ಮಾಸಿಕ ಶುಲ್ಕ 20 ರೂ. ಹೆಚ್ಚಳ, 120 ರೂ. ಇದ್ದ ನಿಗದಿತ ಶುಲ್ಕ 140 ರೂ.ಗಳಿಗೆ ಏರಿಕೆಯಾಗಿದೆ.

ಹೊಸ ವಾಹನ ಖರೀದಿಗೆ ಹೆಚ್ಚುವರಿ ಸೆಸ್ ವಿಧಿಸಲಾಗುತ್ತಿದೆ. ಉಕ್ಕು, ಬಿಡಿಭಾಗ ದುಬಾರಿ, ಬಿಡಿ ಭಾಗ, ಉಕ್ಕು ಗಳ ಆಮದು ದರ ಕೂಡ ಏಪ್ರಿಲ್‌ನಿಂದ ಏರಿಕೆಯಾಗುತ್ತಿದೆ. ಇದರ ಪರಿಣಾಮ ವಾಹನ ಬೆಲೆ ದುಬಾರಿಯಾಗು ತ್ತಿದೆ. ಮುದ್ರಾಂಕ ಶುಲ್ಕ 50ರೂ.ನಿಂದ 500ರೂ.ಗೆ ಹೆಚ್ಚಳವಾಗಲಿದೆ. ಅಫಿಡವಿಟ್ ಶುಲ್ಕ: 20 ರೂ.ನಿಂದ 100 ರೂ. ಏರಿಕೆಯಾಗಲಿದೆ. ಶೀಘ್ರ ನೀರಿನ ದರ ಲೀಟರ್‌ಗೆ ಒಂದು ಪೈಸೆ ಏರಿಕೆಯಾಗಲಿದೆ.

Related Posts

Leave a Reply

Your email address will not be published. Required fields are marked *