Wednesday, October 15, 2025
Menu

ಹಾಲಿನ ಖರೀದಿ ದರ ಹೆಚ್ಚಳ ಸರ್ಕಾರದ ಪರಿಶೀಲನೆಯಲ್ಲಿದೆ: ಸಚಿವ ಕೆ.ವೆಂಕಟೇಶ್

ಬೆಂಗಳೂರು: ಹಾಲಿನ ಮಾರಾಟ ದರವನ್ನು ಹೆಚ್ಚಿಸಿ, ಹಾಲಿನ ಖರೀದಿ ದರವನ್ನು ಸಹ ಹೆಚ್ಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಪರಿಶೀಲನೆಯಲ್ಲಿಯಲ್ಲಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತನಲ್ಲಿ ಸದಸ್ಯರಾದ ಡಾ ಉಮಾಶ್ರೀ ಮತ್ತು ಡಾ.ಎಂ.ಜಿ. ಮುಳೆ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಹಾಲಿನ ಖರೀದಿ ದರ ಹೆಚ್ಚಿಸುವ ಸಂಬಂಧ ಇರುವ ಸಾಧಕ-ಭಾದಕಗಳ ಬಗ್ಗೆ ರಾಜ್ಯ ಸರ್ಕಾರದ ಪಶು ಸಂಗೋಪನೆ ಮತ್ತು ಸಹಾಕರ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ಚರ್ಚಿಸಲಾಗುತ್ತಿದೆ ಎಂದರು.

ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನಕ್ಕೆ ಸಂಬಂದಿಸದಂತೆ ಸಾಮಾನ್ಯ ವರ್ಗದ ರೂ 613.58 ಕೋಟಿ, ಪರಿಶಿಷ್ಟ ಜಾತಿ ರೂ. 18.29 ಕೋಟಿ, ಪರಿಶಿಷ್ಟ ಪಂಗಡದ ರೂ. 24.20 ಕೋಟಿಯಂತೆ ಮಾಹೆಯಾನ 904547 ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಪಾವತಿಸಲು ಬಾಕಿ ಇರುತ್ತದೆ. ಪ್ರೋತ್ಸಾಹಧನ ನೀಡಲು ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Related Posts

Leave a Reply

Your email address will not be published. Required fields are marked *