Menu

ಮಸೂದೆ ಹೆಸರುಗಳಲ್ಲಿ ಹಿಂದಿ ಪದ ಹೆಚ್ಚಳ: ಹಿಂದಿಯೇತರರಿಗೆ ಅನ್ಯಾಯವೆಂದ ಪಿ ಚಿದಂಬರಂ

ಸಂಸತ್ತಿನಲ್ಲಿ ಮಂಡನೆಯಾಗುವ ಮಸೂದೆಗಳ ಹೆಸರುಗಳಿಗೆ ಇಂಗ್ಲಿಷ್‌ ಲಿಪಿಯಲ್ಲಿ ಬರೆಯಲಾದ ಹಿಂದಿ ಪದಗಳನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಹಿಂದಿ ಮಾತನಾಡದ ನಾಗರಿಕರು ಮತ್ತು ರಾಜ್ಯಗಳಿಗೆ ಅನ್ಯಾಯ ಮಾಡಿದಂತೆ ಎಂದು ಕಾಂಗ್ರೆಸ್‌ ಮುಖಂಡ ಪಿ ಚಿದಂಬರಂ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ. ಇಂಗ್ಲಿಷ್ ಅಕ್ಷರಗಳಲ್ಲಿ ಹಿಂದಿ ಭಾಷೆ ಬಳಕೆ ಮಾಡಲಾಗುತ್ತಿದೆ. ಹಿಂದಿಯೇತರ ಭಾಷೆ ಮಾತನಾಡುವ ದೇಶದ ಪ್ರಜೆಗಳಿಗೆ ಮಾಡುವ ಅವಮಾನ ಎಂದು ಕಾಂಗ್ರೆಸ್‌ ಟೀಕಿಸಿತ್ತು.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಚಾರವಾಗಿ ಪೋಸ್ಟ್‌ ಮಾಡಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರು, ಸಂಸತ್ತಿನಲ್ಲಿ ಪರಿಚಯಿಸಲಿರುವ ಮಸೂದೆಗಳ ಹೆಸರುಗಳಲ್ಲಿ ಸರ್ಕಾರವು ಇಂಗ್ಲಿಷ್ ಅಕ್ಷರಗಳಲ್ಲಿ ಹಿಂದಿ ಪದಗಳನ್ನು ಬಳಸು ವುದನ್ನು ನಾನು ವಿರೋಧಿಸುತ್ತೇನೆ. ಸಂಸತ್‌ನಲ್ಲಿ ಇಲ್ಲಿಯವರೆಗೆ, ಮಸೂದೆಯ ಶೀರ್ಷಿಕೆಯನ್ನು ಇಂಗ್ಲಿಷ್ ಆವೃತ್ತಿಯಲ್ಲಿ ಇಂಗ್ಲಿಷ್ ಪದಗಳಲ್ಲಿ ಮತ್ತು ಮಸೂದೆಯ ಹಿಂದಿ ಆವೃತ್ತಿಯಲ್ಲಿ ಹಿಂದಿ ಪದಗಳಲ್ಲಿ ಬರೆಯುವ ಪದ್ಧತಿ ಇತ್ತು. 75 ವರ್ಷಗಳ ಆಚರಣೆ ಯಲ್ಲಿ ಯಾರೂ ಯಾವುದೇ ತೊಂದರೆಯ ಬಗ್ಗೆ ಮಾತನಾಡದೆ ಇರುವಾಗ ಸರ್ಕಾರ ಏಕೆ ಬದಲಾವಣೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಹಿಂದಿ ಮಾತನಾಡದ ಜನರು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾದ ಹಿಂದಿ ಪದಗಳಲ್ಲಿರುವ ಶೀರ್ಷಿಕೆಗಳೊಂದಿಗೆ ಮಸೂದೆ/ಕಾಯ್ದೆಯನ್ನು ಗುರುತಿಸಲು ಸಾಧ್ಯವಿಲ್ಲ; ಅಥವಾ ಅವರು ಮಸೂದೆ/ ಕಾಯ್ದೆಯ ಹೆಸರು ಉಚ್ಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇಂಗ್ಲಿಷ್ ಸಹಾಯಕ ಅಧಿಕೃತ ಭಾಷೆಯಾಗಿ ಉಳಿಯುತ್ತದೆ ಎಂಬ ಸರ್ಕಾರಗಳ ಭರವಸೆ ಮುರಿಯುವ ಅಪಾಯದಲ್ಲಿದೆ ಎಂದು ಆತಂಕಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

ಕೇಂದ್ರವು ಭಾರತದ ಭಾಷಾ ವೈವಿಧ್ಯತೆಯನ್ನು ನಿರ್ಲಕ್ಷಿಸುತ್ತದೆ. ಹಿಂದಿ ಅಧಿಕೃತ ಭಾಷೆಯಲ್ಲದ ರಾಜ್ಯಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *