ಸಿಂಧನೂರು : ಮಹಿಳಾ ರಾಜ್ಯ ಆಯೋಗವು ನೊಂದ ಬಡ ಮಹಿಳೆಯರ ಹಾಗೂ ತುಳಿತಕ್ಕೆ ಒಳಗಾದವರ ಪರ ಸದಾ ಕಾಲ ಕೆಲಸ ಮಾಡುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ನಗರದ ಟೌನ್ ಹಾಲಿನಲ್ಲಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸಿಂಧನೂರು, ತುರುವಿಹಾಳ ಮತ್ತು ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ಸಿಂಧೂಳ್ ಸಮುದಾಯ ಅಲೆಮಾರಿ ಮಹಿಳೆಯರು ಮತ್ತು ಮಾಜಿ ದೇವದಾಸಿ ಮಹಿಳೆಯರೊಂದಿಗೆ ಹಮ್ಮಿಕೊಳ್ಳಲಾಗಿದೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.
ಯಾವುದೇ ಮಹಿಳೆಯರಿಗೆ ಅಣ್ಣಯ್ಯ ಆದಾಗ ಸ್ಪಂಧಿಸುವ ಕೆಲಸ ಇಲಾಖೆಯಿಂದ ಆಗುತ್ತದೆ ಯಾವ ಮಹಿಳೆಯರು ನೊಂದುಕೊಳ್ಳುವ ಕೆಲಸ ಮಾಡಬಾರದು ಗಟ್ಟಿ ಧ್ವನಿಯಿಂದ ಧೈರ್ಯದಿಂದ ನಿಲ್ಲುವ ಕೆಲಸ ಮಹಿಳೆಯರು ಮಾಡಬೇಕು, ಆಗ ಮಾತ್ರ ಮಹಿಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಹೆಣ್ಣು ಮಕ್ಕಳು ಶಿಕ್ಷಣದಿಂದ,ನಾಯಕತ್ವ ಗುಣ ಬೆಳೆಯಲಿ : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು, ಆಗ ನಮಗೆ ಕಾನೂನಿನ ಪ್ರಜ್ಞೆ ಬರಲು ಸಾಧ್ಯವಾಗುತ್ತದೆ ಜೊತೆಗೆ ಎಲ್ಲಾ ಮಹಿಳೆಯರು ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಆಗಬೇಕು, ಆಗ ನಮಗೆ ನಾಯಕತ್ವ ಗುಣ ಬರುತ್ತದೆ ಪ್ರತಿಯೊಬ್ಬರು ಬಡವರು ನಾಯಕರು ಆದಾಗ ಮಾತ್ರ ಶೋಷಣೆ ಮುಕ್ತ ಸಮುದಾಯ ಆಗಲು ಸಾಧ್ಯ ಎಂದರು.
ಮಹಿಳೆಯರ ಸಮಸ್ಯೆಗೆ ತಕ್ಷಣವೇ ಸ್ಪಂದನೆ : ರಾಜ್ಯದಲ್ಲಿ ಅನೇಕ ಜಿಲ್ಲಾ ಕೇಂದ್ರಗಳಲ್ಲೂ ಮಹಿಳೆಯರ ಸಮಸ್ಯೆಯ ಕುರಿತು ಸಭೆ ನಡೆಸಿದ್ದೇನೆ, ಯಾವುದೇ ಸಭೆ ಇರಲಿ ತಕ್ಷಣ ಸ್ಪಂದಿಸುವ ಕೆಲಸ ಸರಕಾರ ಮಾಡುತ್ತದೆ, ಒಂದು ವೇಳೆ ಮಹಿಳೆಯರ ಪರ ಇಲ್ಲದ ಅಧಿಕಾರಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವ ಕೆಲಸ ನಮ್ಮಿಂದ ಆಗುತ್ತದೆ ಎಲ್ಲರಿಗೂ ಗೌರವಿಸುವ ಇಲಾಖೆ ಮಹಿಳಾ ಆಯೋಗ ಆಗಿದೆ ಎಂದರು.
ಅನೇಕ ಸಮಸ್ಯೆ ಬಿಚ್ಚಿಟ್ಟ ಮಹಿಳೆಯರು: ಸಂವಾದ ಸಮಯದಲ್ಲಿ ನೂರಾರು ಮಹಿಳೆಯರು ಅನೇಕ ರೀತಿಯ ಸಮಸ್ಯೆಗಳು ಮಹಿಳಾ ಆಯೋಗದ ಅಧ್ಯಕ್ಷರ ಮುಂದೆ ಹಂಚಿಕೊಂಡರು, ಕೆಲವರಿಗೆ ತಕ್ಷಣವೇ ಉತ್ತರ ನೀಡಿ ಸ್ಪಂದಿಸುವ ಕೆಲಸ ಅಧ್ಯಕ್ಷರಿಂದ ಆಗಿದೆ ಇನ್ನು ಕೆಲವರಿಗೆ ಕಾನೂನು ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅರುಣ್ ದೇಸಾಯಿ, ತಾ.ಪಂ ಅಧಿಕಾರಿ ಚಂದ್ರಶೇಖರ ರೆಡ್ಡಿ,ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಧಿಕಾರಿಗಳಾದ ಶರಣಮ್ಮ, ಲಿಂಗನಗೌಡ, ಅಶೋಕ ತುರವಿಹಾಳ,ಪಿ.ಐ ರಾಜಕುಮಾರ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗವೇಣಿ ಪಾಟೀಲ್, ದಾಕ್ಷಾಯಣಮ್ಮ, ಲಕ್ಷ್ಮಿ ಪತ್ತಾರ್ ಮಂಜು ಗಿರಿಜಾಲಿ ಸೇರಿದಂತೆ ಇತರರು ಇದ್ದರು.