Menu

42ರ ವಿವಾಹಿತೆಯ ಸಹವಾಸ: ಆತ್ಮಹತ್ಯೆ ಮಾಡಿಕೊಂಡ ನೆಲಮಂಗಲದ ಜಿಮ್‌ ಟ್ರೈನರ್‌ ಯುವಕ

ವಿವಾಹಿತೆಯ ಸಹವಾಸ ಮಾಡಿ ಆಕೆಯಿಂದ ಬ್ಲ್ಯಾಕ್‌ಮೇಲ್‌, ಕಿರುಕುಳಕ್ಕೆ ಒಳಗಾದ ಯುವಕ 28 ವರ್ಷದ ಜಿಮ್‌ ಟ್ರೈನರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.

ದಿಲೀಪ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ, ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದರು. ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ವಿವಾಹಿತ ಮಹಿಳೆ ಸುನೀತಾಳ ಪರಿಚಯವಾಗಿತ್ತು. ಬಳಿಕ ಆಕೆ ಜೊತೆ ರಿಲೇಶನ್‌ಶಿಪ್‌ ಬೆಳೆದಿದೆ. ನಂತರ ಆಕೆ ಬ್ಲ್ಯಾಕ್‌ಮೇಲ್‌ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಮಹಿಳೆಯ ಬ್ಲ್ಯಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಾವಿಗೂ ಮುನ್ನ ಸುನೀತಾಗೆ ದಿಲೀಪ್ ಕರೆ ಮಾಡಿ ವಿಷಯ ತಿಳಿಸಿ ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆಕೆ ಇನ್‌ಸ್ಟಾಗ್ರಾಮ್‌ ಮೂಲಕ ದಿಲೀಪ್‌ ಸಹೋದರನಿಗೆ ಮೆಸೇಜ್‌ ಮಾಡಿ, ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾಳೆ. ದಿಲೀಪ್‌ ಸಹೋದರ ಬಾಗಿಲು ಮುರಿದು ನೋಡಿದಾಗ ಅದು ನಿಜವಾಗಿತ್ತು.
ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸ್‌ ತಂಡ ಹಾಗೂ ಸೊಕೊ ಟೀಂ ಭೇಟಿ ನೀಡಿ ಪರಿಶೀಲಿಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿವೆ.

Related Posts

Leave a Reply

Your email address will not be published. Required fields are marked *