ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯು ಪ್ರಿಯಕನ ಜೊತೆ ಸೇರಿ ತನ್ನ ಆರು ವರ್ಷದ ಮಗನನ್ನು ಬಕೆಟ್ನಲ್ಲಿದ್ದ ಮುಳುಗಿಸಿ ದೇಹವನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಮಗ ಸತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೃತದೇಹವನ್ನು ನೆಲಕ್ಕೆ ಅಪ್ಪಳಿಸಿದ್ದಾರೆಂದು ಹೇಳಲಾಗಿದೆ. ಬಾಲಕ ಅವರಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಕೊಲೆಗೈದು ಹೃದಯಾಘಾತದಿಂದ ಸಾವು ಎಂಬಂತೆ ತೋರಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆ ಜಿಲ್ಲೆಯ ಖೇಡ್ ನಿವಾಸಿ 27 ವರ್ಷದ ಬಸಿರಾನ್ 10 ವರ್ಷದಿಂದ ಪತಿ ಮಹಬೂಬ್ನಿಂದ ದೂರವಿದ್ದು, ಆತನ ಸ್ನೇಹಿತ ರಾಮ ವಿನಾಯಕ ಕಜೇವಾಡ್ ಜೊತೆ ಸಂಬಂಧ ಹೊಂದಿದ್ದಳು. ಮಹಬೂಬ್ ಮತ್ತು ಬಸಿರಾನ್ ಗೆ ಮೂವರು ಮಕ್ಕಳು. ಇಬ್ಬರು ತಂದೆಯ ಜೊತೆ ವಾಸಿಸುತ್ತಿದ್ದರೆ, ಆರು ವರ್ಷದ ಮಗ ಅವೇಜ್ ತಾಯಿಯ ಜತೆ ಇದ್ದ. ಅವೇಜ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ರಾಮ ಮತ್ತು ಬಸಿರಾನ್ ಅವನನ್ನು ಏಪ್ರಿಲ್ 4ರಂದು ರಾತ್ರಿ ಕೊಲೆಯನ್ನು ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಅವೇಜ್ನ ಶವವನ್ನು ಬಸಿರಾನ್ ಬೀಡ್ನಲ್ಲಿರುವ ಪೋಷಕರ ಮನೆಗೆ ಕೊಂಡೊಯ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದಳು. ಬಾಲಕನ ಅಜ್ಜ ಅಂತ್ಯಕ್ರಿಯೆಗೆ ಬಂದಾಗ ದೇಹದ ಮೇಲೆ ಹಲ್ಲೆಯ ಗುರುತು ಗಮನಿಸಿ ಪೊಲೀಸರಿಗೆ ದೂರು ನೀಡಿದರು. ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂಬುದು ದೃಢಪಟ್ಟಿತು. ಬಸಿರಾನ್ಳನ್ನು ಬಂಧಿಸಿರುವ ಪೊಲೀಸರು ಪರಾರಿಯಾಗಿರುವ ಆರೋಪಿ ರಾಮನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


