ಬೆಂಗಳೂರಿನ ರಕ್ತನಿಧಿ ಘಟಕಗಳಲ್ಲಿ ನಿಗದಿಗಿಂತ ಹೆಚ್ಚಿನ ಹಣ ವಸೂಲಿ, ಅನೈರ್ಮಲ್ಯ ಹಾಗೂ ಅಕ್ರಮಗಳ ಕುರಿತು ಆರೋಪಗಳು ಕೇಳಿಬಂದಿದ್ದು, ಕರ್ನಾಟಕ ಆರೋಗ್ಯ ಇಲಾಖೆ ತನಿಖೆಗೆ ಮುಂದಾಗಿದೆ. ರಕ್ತದ ಮಾದರಿಗಳನ್ನು ಸಂಗ್ರಹ, ಸ್ವಚ್ಛತೆ, ಸಂಗ್ರಹಣಾ ಕ್ರಮಮತ್ತು ಶುಚಿತ್ವದ ಮಾನದಂಡಗಳನ್ನು ಡ್ರಗ್ ಕಂಟ್ರೋಲ್ ಬೋರ್ಡ್ ತಂಡಗಳು ಪರಿಶೀಲನೆ ಚುರುಕುಗೊಳಿಸಿವೆ.
ಬ್ಲಡ್ ಬ್ಯಾಂಕ್‌ಗಳ ಮೇಲೆ ಡ್ರಗ್ ಕಂಟ್ರೋಲ್ ಬೋರ್ಡ್ ಹದ್ದಿನ ಕಣ್ಣಿಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ತಿಳಿಸಿದ್ದಾರೆ. ರಕ್ತನಿಧಿ ಘಟಕಗಳು ಜನರ ಆರೋಗ್ಯದೊಂದಿಗೆ ಆಟವಾಡುವಂತಿಲ್ಲ. ಸರ್ಕಾರದ ನಿಯಮಾವಳಿ ಗಳನ್ನು ಕಡ್ಡಾಯ ಪಾಲಿಸಬೇಕು. ಅಕ್ರಮ ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ದ್ದಾರೆ. ರಕ್ತನಿಧಿ ಘಟಕಗಳಲ್ಲಿ ಅಕ್ರಮ ಅಥವಾ ಅನೈರ್ಮಲ್ಯ ಕಂಡುಬಂದರೆ ಆರೋಗ್ಯ ಇಲಾಖೆಗೆ ದೂರು ಸಲ್ಲಿಸು ವಂತೆ ಮನವಿ ಮಾಡಿದ್ದಾರೆ.
ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳು ಸಾಕಷ್ಟು ಬರುತ್ತಿರುವ ಕಾರಣ ಈ ಘಟಕಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ರಕ್ತ ಸಂಗ್ರಹ ಘಟಕಗಳು ಸರ್ಕಾರದ ನಿಯಮಾ ವಳಿಗಳನ್ನು ಉಲ್ಲಂಘಿಸುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ರಕ್ತದ ಬೇಡಿಕೆಗೆ ತಕ್ಕಂತೆ ಮುಗಂಡ ಹಣ ವಸೂಲಿ, ಪರ್ಯಾಯ ರಕ್ತದಾನಕ್ಕೆ ಹೆಚ್ಚಿನ ಶುಲ್ಕ , ಶುಚಿತ್ವ ಕಾಪಾಡದಿರುವಿಕೆ ಮುಖ್ಯ ಆರೋಪಗಳಾಗಿವೆ.
ತರಬೇತಿ ಪಡೆದ ಸಿಬ್ಬಂದಿಯ ಕೊರತೆಯೂ ರಕ್ತನಿಧಿ ಘಟಕಗಳ ಸೇವೆಯ ಗುಣಮಟ್ಟವನ್ನು ಕುಗ್ಗಿಸಿದೆ ಎಂದು ಹೇಳಲಾ ಗುತ್ತಿದೆ. ಕೆಲವು ತಿಂಗಳಿಂದ ಆರೋಗ್ಯ ಇಲಾಖೆ ಕಲಬೆರಕೆ ಆಹಾರ, ಅಪಾಯಕಾರಿ ರಾಸಾಯನಿಕ ಮತ್ತು ಕಲರ್ ಗಳನ್ನು ಬಳಸುವ ಆಹಾರ ಪದಾರ್ಥಗಳ ಮೇಲೆ ನಿಗಾ ಇರಿಸಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸು ತ್ತಿದೆ. ರಕ್ತನಿಧಿ ಘಟಕಗಳ ಮೇಲಿನ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಡ್ರಗ್ ಕಂಟ್ರೋಲ್ ಬೋರ್ಡ್‌ನೊಂದಿಗೆ ತನಿಖೆಯನ್ನು ಚುರುಕುಗೊಳಿಸಿದೆ. ರಕ್ತ ಸಂಗ್ರಹ ಕ್ಯಾಂಪ್‌ಗಳ ಮೂಲಕ ಸಂಗ್ರಹವಾದ ರಕ್ತದ ಸಂಗ್ರಹಣೆ, ಸುರಕ್ಷತಾ ಕ್ರಮಗಳು ಮತ್ತು ಶುಚಿತ್ವವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ತನಿಖೆಯ ವರದಿಯ ಆಧಾರದ ಮೇಲೆ ತಪ್ಪಿತಸ್ಥ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.