Menu

ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡದಿದ್ದರೆ ಸೋಲು: ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಬಾಂಬ್

iqbal hussen

ರಾಮನಗರ:  ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದರೆ ಮುಂಬರುವ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಆಗಿ ಮಾಡಿ ಎಂದು ಬೇಡಿಕೆ ಸಲ್ಲಿಸಿದ್ದೇನೆ ಎಂದರು.

ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ. ಡಿಸಿಎಂ ಡಿಕೆಶಿಗೂ ಒಂದು ಬಾರಿ ಅವಕಾಶ ಸಿಗಬೇಕು. ಸಾಕಷ್ಟು ಕಷ್ಟಪಟ್ಟು ಪಕ್ಷ ಸಂಘಟನೆ ಮಾಡಿ ಸರ್ಕಾರ ತಂದಿದ್ದಾರೆ. ಕಷ್ಟಕಾಲದಲ್ಲಿದ್ದ ಪಕ್ಷಕ್ಕೆ ಶಕ್ತಿತುಂಬಿ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ ಅವರ ಪರವಾಗಿ ಸಾಕಷ್ಟು ಶಾಸಕರು ಧ್ವನಿಗೂಡಿಸ್ತಾರೆ. ಈ ವಿಚಾರವನ್ನ ಸುರ್ಜೇವಾಲ ಅವರ ಮುಂದೆ ಇಡುತ್ತೇವೆ. ಈ ವಿಚಾರ ಚರ್ಚೆ ಮಾಡಲ್ಲ ಎಂದ ಮೇಲೆ ಅಲ್ಲಿಗೆ ಯಾಕೆ ಹೋಗಬೇಕು? ಎಂದು ವಾಗ್ದಾಳಿ ನಡೆಸಿದರು.

ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ ಮೇಲೆ ಪ್ರಬಲವಾಗಿ ಈ ವಿಚಾರವನ್ನೂ ಚರ್ಚೆ ಮಾಡ್ತೇನೆ. ಇದೇನು ಬಸ್ಸಾ? ಈ ಟ್ರಿಪ್ ಬೇಡ, ನೆಕ್ಸ್ಟ್ ಟ್ರಿಪ್ ಮಾಡಿ ಅಂತ ಹೇಳೋಕಾಗುತ್ತಾ? ಈ ಟರ್ಮ್ ಅಲ್ಲದೇ ಇನ್ಯಾವ ಟರ್ಮ್ ಮಾಡಿ ಅನ್ನೋದಕ್ಕೆ ಆಗುತ್ತಾ? ಡಿಕೆಶಿ ಸಿಎಂ ಆಗುವ ಕಾಲ ಹತ್ತಿರ ಬಂದಿದೆ. ಕ್ರಾಂತಿ ಅಂತ ಹೇಳಿರುವವರೇ ಡೇಟ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿದರು.

ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭೇಟಿ ವಿಚಾರವಾಗಿ ಮಾತನಾಡಿ, ಈಗಾಗಲೇ 40 ಜನ ಶಾಸಕರ ಜೊತೆ ಸುರ್ಜೇವಾಲ ಚರ್ಚೆ ಮಾಡಿದ್ದಾರೆ. ಇಂದು ಮಧ್ಯಾಹ್ನ 3ಕ್ಕೆ ನನ್ನನ್ನೂ ಕರೆದಿದ್ದಾರೆ. ಶಾಸಕರ ಅಹವಾಲು, ಸಮಸ್ಯೆ, ಅಭಿಪ್ರಾಯಗಳನ್ನ ಚರ್ಚೆ ಮಾಡಲಿದ್ದಾರೆ. ನಾನು ಹೋಗಿ ಕ್ಷೇತ್ರದ ಬಗ್ಗೆ ಒಂದಿಷ್ಟು ಚರ್ಚೆ ಮಾಡಿ, ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆಯೂ ಮಾತನಾಡುತ್ತೇನೆ. ಮುಂದೆ ಪಕ್ಷ ಸಂಘಟನೆ ಆಗಬೇಕು ಅಂದರೆ ಕೆಲ ಸಚಿವರ ಮಾತಿಗೆ ಕಡಿವಾಣ ಬೀಳಬೇಕು. ಹಾಗಾಗಿ ಹೈಕಮಾಂಡ್‌ಗೆ ಈ ಬಗ್ಗೆ ಕ್ರಮವಹಿಸುವಂತೆ ಮನವಿ ಮಾಡುತ್ತೇನೆ. ನನ್ನನ್ನೂ ಸೇರಿದಂತೆ ಎಲ್ಲರನ್ನೂ ಹತೋಟಿಗೆ ತನ್ನಿ ಎಂದು ಹೇಳುತ್ತೇನೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *