ಆಧಾರ್ ಹೊಂದಿದ್ದಾರೆ ಎಂದ ಮಾತ್ರಕ್ಕೆ ನುಸುಳುಕೋರರನ್ನೂ ದೇಶದ ಮತದಾರರೆಂದು ಪರಿಗಣಿಸಬೇಕೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿರೋಧಿಸಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ಈ ಸಂಬಂಧ ಹಿರಿಯ ವಕೀಲ ಕಪಿಲ್ ಸಿಬಲ್, ಎಲ್ಲರ ಬಳಿ ಆಧಾರ್ ಕಾರ್ಡ್ ಇದೆಯಲ್ಲಾ, ಅದರಲ್ಲೇ ಜನ್ಮ ದಿನಾಂಕ ಎಲ್ಲವೂ ಇದೆ, 18 ವರ್ಷ ಮೇಲ್ಪಟ್ಟವರು ಅಲ್ಲವೋ ಹೌದೋ ಎಂದು ಪರಿಗಣಿಸಲು ಅಷ್ಟು ಸಾಕಲ್ಲವೇ ಎನ್ನುವ ಪ್ರಶ್ನೆಗೆ ಪೀಠ ಹೀಗೆ ಉತ್ತರಿಸಿದೆ.
ಬೇರೆ ದೇಶದಿಂದ ಒಳನುಸುಳುವ ವ್ಯಕ್ತಿಗಳು ಇದ್ದಾರೆ, ಪಕ್ಕದ ದೇಶಗಳಿಂದ ಭಾರತಕ್ಕೆ ಬರುತ್ತಾರೆ ಕೆಲಸ ಮಾಡುತ್ತಿದ್ದಾರೆ, ವಾಸಿಸುತ್ತಿದ್ದಾರೆ. ರಿಕ್ಷಾ ಚಲಾಯಿಸುವವರಿದ್ದಾರೆ, ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿದ್ದಾರೆ. ಅವರಿಗೆ ಆಧಾರ್ ಕಾರ್ಡ್ ನೀಡಿದರೆ ಅವರು ಸಬ್ಸಿಡಿ ಪಡಿತರ ಅಥವಾ ಇತರ ಪ್ರಯೋಜನಪಡೆಯಬಹುದು, ಅದು ಸಾಂವಿಧಾನಿಕ ನೀತಿಯ ಭಾಗ. ಆದರೆ ಅವರನ್ನು ಮತದಾರರನ್ನಾಗಿ ಮಾಡಬೇಕೇ ಎಂದು ಪ್ರಶ್ನಿಸಿಮೃತರಾಗಿರುವ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಸ್ಪಷ್ಟಪಡಿಸಿದರು. ಇಂಥ ಪಟ್ಟಿಗಳನ್ನು ಪಂಚಾಯತ್‌ಗಳಲ್ಲಿ ಮತ್ತು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ ಎಂದರು.
ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ, ಅಗತ್ಯವಿದ್ದರೆ ನಾವು ನ್ಯೂನತೆಗಳನ್ನು ಸರಿಪಡಿಸುತ್ತೇವೆ’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ
ಚುನಾವಣಾ ಆಯೋಗವು ಯಾವುದೇ ಪ್ರಶ್ನೆಗಳನ್ನು ಕೇಳದೆ ಫಾರ್ಮ್ 6 ಅನ್ನು ಸ್ವೀಕರಿಸುವ ಅಂಚೆ ಕಚೇರಿಯಲ್ಲ ಎಂದು ಹೇಳಿದೆ. ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆಯೋಗವು ಯಾವಾಗಲೂ ಶಾಸನಬದ್ಧ ಅಧಿಕಾರವನ್ನು ಹೊಂದಿರುತ್ತದೆ ಎಂದು ಪೀಠ ಹೇಳಿದೆ.


