ಭಾರತೀಯ ವಾಯುಪಡೆಯ ಜಾಗ್ವರ್ ಯುದ್ಧ ವಿಮಾನ ರಾಜಸ್ಥಾನದ ಚುರು ಜಿಲ್ಲೆಯ ಭಾನುಡಾ ಗ್ರಾಮದ ಬಳಿ ಬುಧವಾರ ಪತನಗೊಂಡಿದ್ಉದ, ಪೈಲೆಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ವಿಮಾನದ ಅವಶೇಷಗಳಡಿಯಲ್ಲಿ ಪೈಲಟ್ ದೇಹದ ಜೊತೆಗೆ ಹೊಲದಲ್ಲಿ ಮತ್ತೊಂದು ಶವ ಪತ್ತೆಯಾಗಿವೆ.
ಮೃತದೇಹ ತೀವ್ರವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪಘಾತದಲ್ಲಿ ಮೃತಪಟ್ಟಿರುವ ಪೈಲಟ್ ಮತ್ತು ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕೆಲಸವನ್ನು ಸೇನೆ ಮತ್ತು ಸ್ಥಳೀಯ ಆಡಳಿತ ನಡೆಸುತ್ತಿದೆ.