ಯಡಿಯೂರಪ್ಪನ ಚೇಲಾಗಿರಿ ಮಾಡಿ ಅಪ್ಪಾಜಿ ಎಂದು ಹೇಳುವುದಿಲ್ಲ. ನಾನು ಸ್ವಾಭಿಮಾನದಿಂದ ಇದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ, ಆರೆಸ್ಸೆಸ್ ನಮ್ಮ ಆದರ್ಶಗಳು. ಭ್ರಷ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನವರನ್ನು ಅಧ್ಯಕ್ಷಗಿರಿಯಿಂದ ಇಳಿಸಿ, ಮನೆಯಲ್ಲಿ ಕೂರಿಸುವವರೆಗೆ ನಾನು ಬಿಜೆಪಿಗೆ ಹೋಗುವುದಿಲ್ಲ. ಜೆಸಿಬಿ ಪಕ್ಷ ರೆಡಿ ಇದೆ. ಸ್ವತಃ ಪಕ್ಷ ಕಟ್ಟುತ್ತೇನೆ ಎಂದು ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನ ಕುಟುಂಬವನ್ನು ಖುಷಿ ಪಡಿಸಲು ಕೇಂದ್ರ ಬಿಜೆಪಿಯ ನಾಯಕರು ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ 40 ಸ್ಥಾನ ಬರುತ್ತದೆ. ಚುನಾವಣೆಗೆ ನಾನು ಬಂದರೆ 140 ಸ್ಥಾನ ಬರುತ್ತದೆ. ಕಾಂಗ್ರೆಸ್ ಕೇವಲ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದಿಂದ ಹಿಂದೂ ಕಾರ್ಯರ್ತರ ಹತ್ಯೆಯ ಕಾರಣಕ್ಕೆ ಕಾಂಗ್ರೆಸ್ ಗೆದ್ದಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪನ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಯಿತು. ಆಗ ಯಡಿಯೂರಪ್ಪ ಏನು ಮಾಡಿದ್ದಾರೆ. ಹೀಗಾಗಿ ಹಿಂದೂ ಕಾರ್ಯಕರ್ತರು ಬೇಜಾರಾಗಿ ಬಿಜೆಪಿಯಿಂದ ದೂರ ಸರಿದರು. ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಬಂತು ಎಂದರು.
ಯತ್ನಾಳ ಕ್ರೇಜಿವಾಲ್ ಆಗ್ತೀರಾ ಎಂದು ಕೇಳಿದ ಪ್ರಶ್ನೆಗೆ ,ನಾನು ಕ್ರೇಜಿವಾಲ್ ಆಗ್ತಿನೋ ಯೋಗಿ ಆದಿತ್ಯನಾಥ ಆಗ್ತಿನೋ ನೀವೇ ನೋಡಿ. 2028 ಕ್ಕೆ ನಾನೇ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ 11 ಜೆಸಿಬಿ ಪೂಜೆ ಮಾಡಿ ಯಾರು ಗಣಪತಿ ಮೇಲೆ ಕಲ್ಲು ಹೊಡೆಯುತ್ತಾರೋ ಅವರ ಮನೆ, ಮಸೀದಿನೂ ನೆಲಸಮ ಮಾಡುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ನಾಟಿಕೋಳಿ ಪ್ರಿಯ. ಡಿಕೆ ಶಿವಕುಮಾರ ನೋಟು ಪ್ರಿಯ. ಸಿದ್ದರಾಮಯ್ಯ ಭ್ರಷ್ಟರಾಗಿದ್ದು, ಡಿಕೆ ಶಿವಕುಮಾರ್ ಆಜನ್ಮನೇ ಭ್ರಷ್ಟ. ಇಬ್ಬರೂ ಸೇರಿ ಸರ್ಕಾರವನ್ನು ಲೂಟಿ ಮಾಡುತ್ತಿದ್ದಾರೆಯೇ ಹೊರತು ಜನಪರ ಅಭಿವೃದ್ಧಿ ಕಾಮಗಾರಿ ಆಗುತ್ತಿಲ್ಲ. ಈ ಸರ್ಕಾರದಲ್ಲಿ ಮುಸ್ಲಿಂ ಓಲೈಕೆಯಾಗುತ್ತಿದೆಯೇ ಹೊರತು ಏನೂ ಕೆಲಸ ಆಗುತ್ತಿಲ್ಲ. ಉರ್ದು ಶಾಲೆಗೆ ಅನುದಾನ ನೀಡುತ್ತಾರೆ. ಕನ್ನಡ ಸರ್ಕಾರಿ ಶಾಲೆಗಳ ಕಟ್ಟಡ ಕುಸಿದು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅವುಗಳನ್ನು ವಿಲೀನ ಮಾಡಲು ಹೊರಟಿದ್ದಾರೆ. ಮದರಸ, ಉರ್ದು ಶಾಲೆ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತ್ತಾರೆ. ದೇವಸ್ಥಾನದ ಹುಂಡಿ ಹಣ ಪಡೆದು ಮಸೀದಿ ಕಟ್ಟುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರವನ್ನು ವಿರೋಧಿಸಲು ಬಿಜೆಪಿ ವಿಫಲವಾಗಿದ್ದು, ರಾಜ್ಯಾಧ್ಯಕ್ಷನ ಮೇಲೆ ನೂರಾರು ಕೋಟಿ ರೂ. ಭ್ರಷ್ಟಾಚಾರದ ಆರೋಪವಿದೆ. ಪೂಜ್ಯ ತಂದೆಯವರ ಪೂಜ್ಯ ಕಿರಿಯ ಮಗ ಬಿ.ಎಸ್.ಯಡಿಯೂಪ್ಪ ಎಂದು ಸಹಿ ಮಾಡಿರುವುದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ಬಳಿ ಇದೆ. ಅಧಿವಿವೇಶನದಲ್ಲಿ ವಿಜಯೇಂದ್ರ ಎದ್ದು ನಿಂತು ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿದರೆ ಫೈಲ್ ತರಲಾ ಎಂದು ಕೇಳುತ್ತಾರೆ. ಆಗ ವಿಜಯೇಂದ್ರ ಆ ರೀತಿ ಹೇಳಿಲ್ಲ. ಸನ್ಮಾನ್ಯ ಅಧ್ಯಕ್ಷರೇ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳುತ್ತಾರೆ ಎಂದು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಖರ್ಗೆ ವಿರುದ್ಧ ಛಲವಾದಿ ನಾರಾಯಣ ಸ್ವಾಮಿ ಸ್ವಲ್ಪ ಮಾತನಾಡುತ್ತಿದ್ದು, ಅವರನ್ನು ಯಡಿಯೂಪ್ಪ ಮನೆಗೆ ಕರೆದು ಹುಷಾರ್ ಎಂದು ಎಚ್ಚರಿಸಿದ್ದಾರೆ. ವಾಚ್ ನೀಡುವುದು, ನಾಟಿಕೋಳಿ ಸಾರು, ಇಡ್ಲಿ ತಿನ್ನುವುದಕ್ಕೆ ಜನರ ಗೆಲ್ಲಿಸಿ ಕಳುಹಿಸಿಲ್ಲ. ರೈತರು ಬೆಳೆದ ಮೆಕ್ಕೆಜೋಳಕ್ಕೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಮಕ್ಕೆಜೋಳವನ್ನು ಕಾರ್ಖಾನೆಯವರು ಖರೀದಿ ಮಾಡಬೇಕಾದರೆ ಕೇಂದ್ರ ಸರ್ಕಾರ ಇಥನಾಲ್ ಬೆಲೆ ಏರಿಕೆ ಮಾಡಬೇಕಿದೆ. ಸರ್ಕಾರ ಕಾರ್ಖಾನೆಗಳಿಗೆ ಸಬ್ಸಿಡಿ ನೀಡಬೇಕು. ಇಲ್ಲಿ ಹೋರಾಟ ಮಾಡುವ ಬದಲು ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಕುಳಿತುಕೊಂಡು 71 ರೂ. ಇದ್ದ ಇಥೆನಾಲ್ ಬೆಲೆ 75 ಮಾಡುವಂತೆ ವಿಜಯೇಂದ್ರ ಹೇಳಲಿ. ಕರ್ನಾಟಕದಲ್ಲಿ ಉತ್ಪಾದನೆಯಾಘುವ ಇಥೆನಾಲ್ ಪೆಟ್ರೋಲಿಯಂ ಕಂಪೆನಿ ಖರೀದಿಸಬೇಕು. ಅವಾಗ ರೈತರಿಗೆ ಅನುಕೂಲವಾಗಯತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿಶೇಷ ಜವಾಬ್ದಾರಿ ಇದೆ ಎಂದರು.


