ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಯುದ್ಧ ನಿಲ್ಲಿಸಿದ್ದು ನಾನೇ, ಸುಂಕಾಸ್ತ್ರ ಹಾಗೂ ವ್ಯಾಪಾರ ಒತ್ತಡ ಪ್ರಮುಖ ಪಾತ್ರ ವಹಿಸಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿದ್ದಾರೆ.
ಟ್ರಂಪ್ ತಾನು ವಿಧಿಸಿರುವ ಸುಂಕ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸುಂಕ ನೀತಿಗಳು ಆರ್ಥಿಕವಾಗಿ ಅಮೆರಿಕವನ್ನು ಬಲಪಡಿಸುವ ಜೊತೆಗೆ ಭಾರತ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳ ನಡುವಿನ ಸಂಭಾವ್ಯ ಯುದ್ಧವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಸುಂಕಗಳಿಂದ ನಾವು ನೂರಾರು ಶತಕೋಟಿ ಡಾಲರ್‌ಗಳನ್ನು ಗಳಿಸುವುದಲ್ಲದೆ ಸುಂಕಗಳಿಂದಾಗಿ ನಾವು ಶಾಂತಿಪಾಲಕರಾಗಿದ್ದೇವೆ. ಯುದ್ಧಗಳನ್ನು ನಿಲ್ಲಿಸಲು ನಾನು ಸುಂಕಗಳನ್ನು ಬಳಸುವುದಾಗಿ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ನಮ್ಮ ಸುಂಕ ತಂತ್ರ ಆರ್ಥಿಕ ಮತ್ತು ರಾಜತಾಂತ್ರಿಕವಾಗಿ ಯಶಸ್ವಿಯಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಸುಂಕ ಒತ್ತಡವು ಶಾಂತಗೊಳಿಸಿತು ಎಂದು ತಿಳಿಸಿದ್ದಾರೆ.
ನಾನು ಸುಂಕ ವಿಧಿಸದಿದ್ದರೆ ಕನಿಷ್ಠ ನಾಲ್ಕು ಯುದ್ಧಗಳು ನಡೆಯುತ್ತಿದ್ದವು. .ಭಾರತ ಮತ್ತು ಪಾಕಿಸ್ತಾನ ದಾಳಿಗೆ ಸಿದ್ಧವಾಗಿದ್ದವು, ನಾನು ಸುಂಕಗಳ ಮೂಲಕ ಒತ್ತಡ ಹೇರಿದೆ, ನನ್ನ ಸೂಚನೆ ಪರಿಣಾಮಕಾರಿಯಾಗಿತ್ತು. ಹೀಗಾಗಿ ಯುದ್ಧ ನಿಂತಿತು ಎಂದಿದ್ದಾರೆ. ಸುಂಕಗಳಿಂದ ಅಮೆರಿಕಕ್ಕೆ ಶತಕೋಟಿ ಡಾಲರ್‌ಗಳ ಆದಾಯ ಬಂದಿದೆ, ದೇಶವನ್ನು ಶ್ರೀಮಂತವಾಗಿಸಿದೆ. ಸುಂಕಗಳಿಂದ ಶಾಂತಿಪಾಲಕರಾಗಿದ್ದೇವೆ, ಆರ್ಥಿಕವಾಗಿ ಸಮೃದ್ಧರಾಗಿದ್ದೇವೆಂದು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಮಾತುಕತೆಯು ಬೇರೆ ಯಾವುದೇ ದೇಶದ ಮಧ್ಯಸ್ಥಿಕೆಯಿಂದ ಆಗಿರಲಿಲ್ಲ, ಬದಲಿಗೆ ಮಿಲಿಟರಿ ಮಾರ್ಗಗಳ ಮೂಲಕ ನೇರವಾಗಿ ತೀರ್ಮಾನಕ್ಕೆ ಬರಲಾಗಿದೆ ಎಂದು ಭಾರತ ಈಗಾಗಲೇ
ಸ್ಪಷ್ಟಪಡಿಸಿದೆ.