ಪಾಕಿಸ್ತಾನದ ನಂಬಿಕಸ್ತ ಗುಪ್ತಚರ ಆಗಿದ್ದ ನಾನು 26/11ರ ದಾಳಿ ಗಮನಿಸಲು ಮುಂಬೈನಲ್ಲೇ ಇದ್ದೆ ಎಂದು ಉಗ್ರ ತಹವೂರ್ ಹುಸೇನ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ತಹವೂರ್ ಹುಸೇನ್ ಅವರನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆಯಲ್ಲಿ ನಾನು ಮತ್ತು ಸ್ನೇಹಿತ ಡೇವಿಡ್ ಕೊಲೆಮನ್ ಪಾಕಿಸ್ತಾನ ಮೂಲದ ಲಷ್ಕರ್ ಇ-ತೋಯ್ಬಾ ಸಂಘಟನೆ ಹಲವಾರು ಬಾರಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾಗಿ ತಿಳಿಸಿದ್ದಾರೆ.
ಪಾಕಿಸ್ತಾನದ ನಂಬಿಕಸ್ತ ಗುಪ್ತಚರ ಆಗಿದ್ದ ನಾನು ಸೂಚನೆ ಮೇರೆಗೆ ಮುಂಬೈ ದಾಳಿಯ ಉಸ್ತುವಾರಿ ಗಮನಿಸಲು ಮುಂಬೈನಲ್ಲಿ ನೆಲೆಸಿದ್ದು, ದಾಳಿಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದೆ ಎಂದು ಹೇಳಿದ್ದಾರೆ.
ಖಲೀಜ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ನನ್ನನ್ನು ಸೌದಿ ಅರೆಬಿಯಾಗೆ ಕಳುಹಿಸಿಕೊಟ್ಟಿತ್ತು ಎಂದು 64 ವರ್ಷದ ತಹವೂರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಪ್ರಸ್ತುತ ಎನ್ ಐಎ ಸುಪರ್ದಿಯಲ್ಲಿರುವ ತಹವೂರ್ ನನ್ನು ಮುಂಬೈ ಕ್ರೈಂ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.