ಅಪ್ಪ ಕಳ್ಳ, ಮಗ ಸುಳ್ಳ ಇದಾನೆ. ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡಿ ಅಧಿಕಾರ ಪಡೆದಿದ್ದಾರೆ. ವಿಜಯೇಂದ್ರ ಯಾವತ್ತೂ ಸಿಎಂ ಆಗಲ್ಲ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗುವುದು ಖಚಿತ. ಆದರೆ ವಿಜಯೇಂದ್ರ ಸಿಎಂ ಆಗ್ತೀನಿ ಅಂದುಕೊಂಡಿದ್ದಾರೆ. ಅದು ಸಾಧ್ಯವಿಲ್ಲ ಎಂದರು.
ನಾನು ಹೊಸ ಪಕ್ಷ ಆರಂಭಿಸುವ ಬಗ್ಗೆ ಪಕ್ಕಾ ಪ್ಲಾನ್ ಮಾಡಿದ್ದೇನೆ. ಹಿಂದೂಗಳ ಮತ ವಿಭಜನೆ ಆಗಬಾರದು ಎಂಬುದು ನನ್ನ ಲೆಕ್ಕಾಚಾರ. ಈ ಬಗ್ಗೆ ಯೋಚನೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಅವರು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇರುವ ವಂದತಿಗೆ ಪ್ರತಿಕ್ರಿಯಿಸಿದ ಅವರು, ನಾನಲ್ಲ, ನನ್ನ ಚಪ್ಪಲಿನೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ನಾನು ಬಿಜೆಪಿಗೂ ವಾಪಸ್ ಕರೆದುಕೊಳ್ಳಿ ಎಂದು ಅಂಗಲಾಚುವುದು, ಕ್ಷಮೆ ಕೇಳುವುದು ಮಾಡಲ್ಲ. ಗೌರವಯುತ ರಾಜಕೀಯ ಮಾಡುತ್ತೇನೆ ಎಂದು ಅವರು ಹೇಳಿದರು.