Menu

2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ: ಸತೀಶ್ ಜಾರಕಿಹೊಳಿ

ಜನರು ಅಭಿಮಾನದಿಂದ ಮುಂದಿನ ಸಿಎಂ ಅಂತ ಘೋಷಣೆ ಕೂಗ್ತಾರೆ, ಆದರೆ ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನ ಅವರ ಅಭಿಮಾನಕ್ಕಾಗಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗುತ್ತಾರೆ. ಆದರೆ 2028ಕ್ಕೆ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದೇನೆ. ಈಗ ಸಿಎಂ ಯಾರಾಗುತ್ತಾರೆ ಆಗಲಿ, ಮುಂದಿನ ಚುನಾವಣೆಗೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದ್ದಾರೆ.

ಈಗ ಅಸ್ಸಾಂ ಚುನಾವಣೆ ಬಂದಿದ್ದು, ಗ್ರೇಟರ್ ಬೆಂಗಳೂರು ಚುನಾವಣೆಯೂ ಇದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಿಲ್ಲಿಸುವುದು ಸೂಕ್ತ. ಶಕೆಂದರೆ ಸಿಎಂ ಮತ್ತು ಡಿಸಿಎಂಗೆ ಹತ್ತಾರು ಕೆಲಸ ಇರುತ್ತದೆ. ಅವರು ಆಗಾಗ ದೆಹಲಿಗೆ ಹೋಗುತ್ತಾರೆ. ಏನೇ ಆದರೂ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಂದು ಹೇಳಿದ್ದಾರೆ.

ದಾವಣಗೆರೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯ ಕಾರ್ಯಕ್ರಮಕ್ಕೆ ಆಗಮಿಸಿದ್ದದ್ದ ವೇಳೆ ಅವರ ಅಭಿಮಾನಿಗಳು ಕೈಯಲ್ಲಿ ಹ್ಯಾಂಡ್ ಪೋಸ್ಟರ್ ಹಿಡಿದು ಮುಂದಿನ ಸಿಎಂ ಸಾಹುಕಾರ್ ಜಾರಕಿಹೊಳಿ ಎಂದು ಜೈಕಾರ ಹಾಕಿದ್ದಾರೆ. ಟೀ-ಶರ್ಟ್ ಮೇಲೆ ಫೋಟೋ, ಪೋಸ್ಟರ್‌ನಲ್ಲಿ ಪೋಟೋ ಹಾಕಿ ಮುಂದಿನ ಸಿಎಂ ಎಂದಿದ್ದಾರೆ. ಹೀಗಾಗಿ ಮಾಧ್ಯಮದವರು ಈ ಬಗ್ಗೆ ಪ್ರತಿಕ್ರಿಯೆ ಕೇಳಿದ್ದು, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *