Menu

ಮತ್ತೊಂದು ಮದುವೆಯಾಗುತ್ತಿದ್ದ ಪತಿ: ಕಲ್ಯಾಣಮಂಟಪಕ್ಕೆ ನುಗ್ಗಿ ತಡೆದ ಪತ್ನಿ

ವಿಚ್ಛೇದನ ನೀಡದೆ ಮತ್ತೊಂದು ಮದುವೆ ಮಾಡಿಕೊಳ್ಳಲು ಹೊರಟಿದ್ದ ಪತಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿದ ಪತ್ನಿ  ಮದುವೆ ತಡೆದಿರುವ ಘಟನೆ ಕುಣಿಗಲ್ ತಾಲೂಕಿನ ಯಡೆಯೂರಿನಲ್ಲಿ ನಡೆದಿದೆ. ಪತ್ನಿಗೆ ಗೊತ್ತಾಗದಂತೆ ಪತಿ ಮತ್ತೊಂದು ಮದುವೆಯಾಗಲು ಹೊರಟಿದ್ದ ಎನ್ನಲಾಗಿದೆ.

2014ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಲೇಪಾಕ್ಷಿಯನ್ನು ಹರಿಪ್ರಸಾದ್ ಮದುವೆಯಾಗಿದ್ದರು. 8ನೇ ತರಗತಿಯಿಂದಲೇ ಇವರಿಬ್ಬರು ಪ್ರೀತಿಸಿದ್ದರು, ಮದುವೆಯಾಗಿ ಹತ್ತು ವರ್ಷವಾಗಿತ್ತು. ಬಳಿಕ ಕೌಟುಂಬಿಕ ಕಲಹದಿಂದ ದಂಪತಿ ಪ್ರತ್ಯೇಕ ವಾಗಿದ್ದರು.

ಲೇಪಾಕ್ಷಿಗೆ ಗೊತ್ತಾಗದಂತೆ ಮಂಡ್ಯದ ಮಳವಳ್ಳಿಯ ನಿಟ್ಟೂರು ಗ್ರಾಮದ ಯುವತಿ ಜೊತೆಗೆ ಹರಿಪ್ರಸಾದ್​ ಮುಂದಾಗಿ ಯಡೆಯೂರಿನ ಕಲ್ಯಾಣ ಮಂಟಪದಲ್ಲಿ ಮದುವೆಯಾಗುತ್ತಿದ್ದರು. ಅಲ್ಲಿಗೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸರ ಜೊತೆ ಲೇಪಾಕ್ಷಿ ಬಂದು ತಡೆದಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಲೇಪಾಕ್ಷಿ ಕುಟುಂಬಸ್ಥರು ಹರೀಶ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

Related Posts

Leave a Reply

Your email address will not be published. Required fields are marked *