Menu

ಮತ್ತೊಂದು ಮದುವೆಯಾದ ಪತಿ: ಮಕ್ಕಳ ಕೊಂದು ಸುಸೈಡ್‌ ಮಾಡಿಕೊಂಡ ಪತ್ನಿ

ಪತಿ ಮತ್ತೊಂದು ಮದುವೆಯಾದ ಕಾರಣಕ್ಕೆ ನೊಂದ ಮಹಿಳೆ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಎಸ್ ಬಾನೋತ್ ಶ್ರಾವಂತಿ (29) ಮತ್ತು ಮಕ್ಕಳಾದ ಕಾರ್ತಿಕ್ (12) ಮತ್ತು ಕೌಶಿಕ್ (10) ಎಂದು ಗುರುತಿಸಲಾಗಿದೆ.

ದೀರ್ಘಕಾಲದ ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ಪ್ರವೀಣ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ತನಿಖೆ ನಡೆಸುತ್ತಿದ್ದಾರೆ.

ಶ್ರಾವಂತಿರು 13 ವರ್ಷಗಳ ಹಿಂದೆ ಬೋಡಾ ಪ್ರವೀಣ್ ಅವರನ್ನು ಮದುವೆಯಾಗಿದ್ದು, ಪ್ರವೀಣ್ ಬೇರೊಬ್ಬ ಮಹಿಳೆಯನ್ನು ಮದುವೆಯಾದ ನಂತರ ದಂಪತಿ ನಡುವೆ ಜಗಳವಾಗುತ್ತಿತ್ತು. ಶ್ರಾವಂತಿ ಇತ್ತೀಚೆಗೆ ಮನೆ ಬಿಟ್ಟು ವಾರಂಗಲ್‌ನಲ್ಲಿರುವ ತವರು ಮನೆಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದ ಹಿರಿಯರು ಮಧ್ಯಪ್ರವೇಶಿಸಿ ಸೋಮವಾರ ರಾತ್ರಿ ಪ್ರವೀಣ್ ಜೊತೆ ಹೈದರಾಬಾದ್‌ಗೆ ಮರಳುವಂತೆ ಮನವೊಲಿಸಿದ್ದರು.

ಮಂಗಳವಾರ ಪ್ರವೀಣ್ ಕೆಲಸದಿಂದ ಹಿಂತಿರುಗಿದಾಗ ಮುಖ್ಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು, ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲು ಒಡೆದು ಒಳಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಬಾಲನಗರ ಎಸಿಪಿ ಪಿ. ನರೇಶ್ ರೆಡ್ಡಿ ತಿಳಿಸಿದ್ದಾರೆ. ಮಕ್ಕಳ ಶವಗಳು ತಾಯಿಯೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ,

Related Posts

Leave a Reply

Your email address will not be published. Required fields are marked *