Thursday, February 19, 2026
Menu

ರಾಮನಗರದಲ್ಲಿ ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ

ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದಲ್ಲಿ ಕೌಟುಂಬಿಕ ಕಲಹ, ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಸುಫಿಯಾ ಬಾನು (21)ಹತ್ಯೆಯಾದ ಮಹಿಳೆ. ಸಲ್ಮಾನ್(22) ಹತ್ಯೆ ಆರೋಪಿ. ಇವರು ರಾಮನಗರದ ಯಾರಬ್ ನಗರ ನಿವಾಸಿಗಳು.

ರಾಮನಗರದ ‌ಫಿಲೆಚೆರಿಯೊಂದರಲ್ಲಿ ಕೆಲಸ ಮಾಡುತ್ತಿರುವಾಗ ಇಬ್ಬರೂ ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಪತ್ನಿ ಸುಫಿಯಾ ಬಾನು ಮನೆಯಲ್ಲಿಯೇ ಸಲ್ಮಾನ್‌ ‌ವಾಸವಾಗಿದ್ದ. ಬುಧವಾರ ಸಂಜೆ ಇಬ್ಬರು ಫಿಲಚೇರಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಮನೆಗೆ ಬಂದಿದ್ದು, ಸುಫಿಯಾ ತಾಯಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಸುಫಿಯಾಳಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ಬೇರೊಬ್ಬರ ಜೊತೆ ಅನೈತಿಕ ಸಂಬಂಧವೊಂದಿದ್ದಾಳೆ ಎಂದು ಕೆಲವು ದಿನಗಳಿಂದ ಸುಫಿಯಾ ಜೊತೆ ಸಲ್ಮಾನ್ ಗಲಾಟೆ ಮಾಡುತ್ತಿದ್ದನಂತೆ. ಬುಧವಾರ ಸಂಜೆಯೂ ಗಲಾಟೆ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ಆರೋಪಿ ಸಲ್ಮಾನ್ ತಾನಾಗಿಯೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ರಾಮನಗರದ ಪುರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ವೃದ್ಧ ಪತಿ ಎದುರೇ ಮಹಿಳೆಯ ಕತ್ತು ಸೀಳಿ ಕೊಲೆ

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ನೆಲಮಂಗಲದ ಪೇಟೆ ಬೀದಿಯಲ್ಲಿ ನಡೆದಿದೆ. ಶೋಭಾ (60) ಕೊಲೆಯಾಗಿರುವ ಮಹಿಳೆ. ಪೊಲೀಸರು ಕೊಲೆ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಂಜೆ ಪೇಟೆ ಬೀದಿಯಿಂದ ಮನೆಗೆ ಬಂದಿದ್ದ ಶೋಭಾರನ್ನು ಆರೋಪಿ ಹಿಂಬಾಲಿಸಿದ್ದಾನೆ. ಅವರ ಮೈಮೇಲಿದ್ದ 100 ಗ್ರಾಂಗೂ ಹೆಚ್ಚು ತೂಕದ ಒಡವೆಯನ್ನು ಗಮನಿಸಿದ್ದ. ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಚಾಕುವಿನಿಂದ ಶೋಭಾರ ಕತ್ತು ಸೀಳಿ ಮೇಲಿದ್ದ ಚಿನ್ನಾಭರಣವನ್ನು ಆರೋಪಿ ದೋಚಿ ಪರಾರಿಯಾಗಿದ್ದಾನೆ.

Related Posts

Leave a Reply

Your email address will not be published. Required fields are marked *