ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪತ್ನಿಯನ್ನು ಕರೆದೊಯ್ದ ಪತ್ನಿ ಆಕೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ.
ದೆಹಲಿಯ ತ್ರಿಲೋಕ್ ಪುರಿ ನಿವಾಸಿ ಅಶೋಕ್ ಕುಮಾರ್ ಪತ್ನಿ ಮೀನಾಕ್ಷಿಯನ್ನು ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕುಂಭಮೇಳಕ್ಕೆ ಕರೆದೊಯ್ಯುವುದಾಗಿ ಕರೆದುಕೊಂಡು ಬಂದಿದ್ದ ಅಶೋಕ್ ಕುಮಾರ್, ಪ್ರಯಾಗ್ ರಾಜ್ ನಲ್ಲಿ ಸುತ್ತಾಡುತ್ತಾ ಫೋಟೊ, ವೀಡಿಯೋಗಳನ್ನು ಸೆರೆಹಿಡಿದು ದಂಪತಿ ಜಾಲಿಯಾಗಿ ಇದ್ದೇವೆ ಎಂದು ಬಿಂಬಿಸಿಕೊಳ್ಳಲು ಮನೆಯಲ್ಲಿದ್ದ ಮಕ್ಕಳಿಗೆ ಕಳುಹಿಸಿಕೊಡುತ್ತಿದ್ದ.
ಡಿ ದರ್ಜೆ ನೌಕರನಾಗಿದ್ದ ಅಶೋಕ್ ಕುಮಾರ್ ಗೆ ಅಕ್ರಮ ಸಂಬಂಧ ಇದ್ದು, ಇದನ್ನು ಪತ್ನಿ ಪದೇಪದೆ ಪ್ರಶ್ನಿಸುತ್ತಿದ್ದಳು. ತನ್ನ ದಾರಿಗೆ ಅಡ್ಡವಾಗಿದ್ದಾಳೆ ಎಂದು ಆಕೆಯನ್ನು ಕೊಲೆ ಮಾಡಲು ಮೂರು ತಿಂಗಳ ಹಿಂದೆಯೇ ಕೊಲೆ ಮಾಡಲು ಸಂಚು ರೂಪಿಸಿದ್ದ.
ಸಂಚಿನ ಭಾಗವಾಗಿ ಕುಂಭಮೇಳಕ್ಕೆ ಕರೆದೊಯ್ದಿದ್ದು, ಜುಲ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದ ಖಾಗಿ ಹೋಟೆಲ್ ನಲ್ಲಿ ಪತ್ನಿಯನ್ನು ಕೊಂದು ಪರಾರಿಯಾಗಿದ್ದ. ಮಹಿಳೆಯ ಗುರುತು ಸಿಗದ ಕಾರಣ ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ಭಿತ್ತಿಪತ್ರ ಅಂಟಿಸಿದ್ದರು.
ಇದೇ ವೇಳೆ ಅಶೋಕ್ ಕುಮಾರ್ ಅವರ ಅಣ್ಣ ಹಾಗೂ ಅವರ ಸಂಬಂಧಿಗಳು ಕುಂಭಮೇಳಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಮಹಿಳೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಅಶೋಕ್ ಕುಮಾರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ವಿಚಾರಣೆ ವೇಳೆ ಅಶೋಕ್ ಕುಮಾರ್ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಹೋಟೆಲ್ ನಲ್ಲಿ ತಂಗಿದ್ದಾಗ ಪತ್ನಿ, ಅನೈತಿಕ ಸಂಬಂಧ ವಿಷಯ ತೆಗೆದು ಜಗಳ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆಕೆ ಬಾತ್ ರೂಮ್ ಗೆ ಹೋದಾಗ ಇದೇ ಸರಿಯಾದ ಸಂದರ್ಭ ಎಂದು ಹಿಂದಿನಿಂದ ಬಂದು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಬಟ್ಟೆ ಬದಲಿಸಿ ಕೊಲೆ ಮಾಡಿದ ಚಾಕುವನ್ನು ಮರೆಮಾಚಿ ಹೋಗಿದ್ದಾನೆ.