Wednesday, February 18, 2026
Menu

ಪ್ರವಾಸದಲ್ಲಿ ಚಾಲಕನೊಂದಿಗೆ ಮಾತು: ಬೆಂಗಳೂರಿನಲ್ಲಿ ಪತ್ನಿಯ ಕೊಲೆಗೈದ ಪತಿ

ಪ್ರವಾಸಕ್ಕೆ ತೆರಳಿದ್ದ ವೇಳೆ ಚಾಲಕನ ಜೊತೆ ಮಾತನಾಡಿದ್ದ ಪತ್ನಿಯ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೇವಿಕಾ(50) ಕೊಲೆಯಾದ ಮಹಿಳೆ ಆಕೆಯನ್ನು ಪತಿ  ಕುಮಾರ್‌ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.  ಆರೋಪಿ ಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದ ವೇಳೆ ದೇವಿಕಾ ಚಾಲಕನ ಜೊತೆ ಮಾತನಾಡಿದ್ದರು. ಇದರಿಂದ ಅನುಮಾನಗೊಂಡಿದ್ದ ಕುಮಾರ್​​, ಮಂಗಳವಾರ  ರಾತ್ರಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ  ಕೊಲೆಗೈದು ಬಳಿಕ  ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಕೂಡಲೇ ಆತನನ್ನು  ಮಕ್ಕಳು ತಡೆದಿದ್ದಾರೆ.

ದೇವಿ ಮತ್ತು ಕುಮಾರ್ ಪುತ್ರಿ ಶಾಲಿನಿ ಮಾತನಾಡಿ,  ನಮ್ಮ ತಂದೆ-ತಾಯಿ ಮದುವೆ ಆಗಿ 40 ವರ್ಷ ಆಗಿದೆ. ಈ ಮೊದಲು ನಮ್ಮ ತಂದೆ ಈ ರೀತಿ ಇರಲಿಲ್ಲ. ಕಳೆದ ಒಂದು ತಿಂಗಳಿಂದ ಅನುಮಾನ  ಶುರು ಮಾಡಿಕೊಂಡಿದ್ದು,  ಮಲಗಿದ್ದಾಗಲೇ  ತಾಯಿಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ.  ಕೊಲೆ ಮಾಡಿದ ಬಳಿಕ ನನ್ನ  ತಮ್ಮನಿಗೆ ಫೋನ್ ಮಾಡಿ ನಿಮ್ಮ ತಾಯಿಯ ಕೊಲೆ ಮಾಡಿದ್ದೇನೆ, ತಾನು ಕೂಡ  ನೇಣು ಹಾಕಿಕೊಳ್ತೇನೆ ಬನ್ನಿ ಎಂದಿದ್ದಾನೆ.

ವಿಚಾರ ಪೊಲೀಸರಿಗೆ ತಿಳಿಸಿ ಕೂಡಲೇ ಸ್ಥಳಕ್ಕೆ ಹೋಗಿದ್ದೇವೆ, ನಮಗೆ ತಂದೆ ಬೇಡ. ಜಾಮೀನು ಎಂದು ನಾವೇನೂ ಹೋಗಲ್ಲ ಎಂದು ಶಾಲಿನಿ ಕಣ್ಣೀರು ಹಾಕಿದ್ದಾರೆ.   ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  4 ದಶಕ ಜೊತೆಯಾಗಿ ಸಂಸಾರ ನಡೆಸಿದ್ದ ದೇವಿಕಾ ಮತ್ತು ಕುಮಾರ್​​ ದಾಂಪತ್ಯ ಹೀಗೆ ದುರಂತ ಅಂತ್ಯ ಕಂಡಿದೆ.  ಆರೋಪಿ ಕುಮಾರ್​​ ಯಾಕೆ ಹೆಂಡತಿಯ ಮೇಲೆ ವಿಪರೀತ ಅನುಮಾನ ಹೊಂದಿದ್ದ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.

Related Posts

Leave a Reply

Your email address will not be published. Required fields are marked *