ವಿಶ್ವಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಆಸ್ಟ್ರೋನೊಮರ್ ಕಂಪನಿಯ ಸಿಇಒ ಮತ್ತು ಹೆಚ್‌ಆರ್ ತಬ್ಬಿಕೊಂಡಿದ್ದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಘಟನೆ ನಡೆದು ಒಂದು ತಿಂಗಳ ಬಳಿಕ ಹೆಚ್‌ಆರ್ ಆಗಿದ್ದ ಮಹಿಳೆ ಮತ್ತು ಆಕೆಯ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜುಲೈ 16 ರಂದು ಬೋಸ್ಟನ್‌ನಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ಆಸ್ಟ್ರೋನೊಮರ್ ಸಿಇಒ ಆಂಡಿ ಬೈರನ್ ಅವರು ಕಂಪನಿಯ ಹೆಚ್‌ಆರ್ ವಿಭಾಗದ ಮುಖ್ಯಸ್ಥೆ ಕ್ರಿಸ್ಟನ್ ಕ್ಯಾಬೋಟ್ ಅವರನ್ನು ತಬ್ಬಿಕೊಂಡಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್ ಆಗಿ ವಿವಾದ ಸೃಷ್ಟಿಸಿತ್ತು.
ಬ್ರಿಟಿಷ್ ಬ್ಯಾಂಡ್‌ನ ಪ್ರದರ್ಶನದ ಭಾಗವಾಗಿ ಕಿಸ್ ಕ್ಯಾಮ್ ಬೈರನ್ ಮತ್ತು ಕ್ಯಾಬೋಟ್‌ರನ್ನು ಉದ್ದೇಶಿಸಿ ಮಾತನಾಡಲಾಯಿತು. ಈ ವೇಳೆ ಅವರಿದ್ದ ಕಡೆಗೆ ಕ್ಯಾಮೆರಾ ಹಿಡಿದಿದ್ದು, ಕ್ಯಾಬೋಟ್ ಅವರನ್ನು ಬೈರನ್ ತಬ್ಬಿಕೊಂಡು ಇಬ್ಬರೂ ದಂಪತಿ ಯಂತೆ ನಿಂತಿರುವುದು ರೆಕಾರ್ಡ್ ಆಗಿತ್ತು. ಈ ವೀಡಿಯೋ ಪ್ರದರ್ಶನವಾಗುತ್ತಿದ್ದಂತೆ ಇಬ್ಬರೂ ಮುಜುಗರಕ್ಕೆ ಒಳಗಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರಚೆಗೂ ಗ್ರಾಸವಾಗಿತ್ತು. ನಂತರ ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
ಘಟನೆ ನಡೆದು ಒಂದು ತಿಂಗಳ ಬಳಿಕ ಹೆಚ್‌ಆರ್ ಮಾಜಿ ಮುಖ್ಯಸ್ಥೆ ಕ್ರಿಸ್ಟನ್ ಕ್ಯಾಬಟ್‌ಗೆ ಆಕೆಯ ಪತಿ ಆಂಡ್ರ್ಯೂ ಕ್ಯಾಬಟ್ ವಿಚ್ಛೇದನ ನೀಡಲು ಮುಂದಾಗಿ ಆ.13 ರಂದು ನ್ಯೂ ಹ್ಯಾಂಪ್‌ಶೈರ್‌ನ ಪೋರ್ಟ್ಸ್‌ಮೌತ್‌ನಲ್ಲಿರುವ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ವೀಡಿಯೊ ವೈರಲ್ ಆದ ಬಳಿಕ ದಂಪತಿಯ ಸಂಬಂಧ ಹದಗೆಟ್ಟಿತ್ತು. ಆಂಡ್ರ್ಯೂ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಾಗ ನೊಂದುಕೊಂಡಿದ್ದು ಮುಜುಗರಕ್ಕೆ ಒಳಗಾಗಿದ್ದರು.