ಗರ್ಭಿಣಿ ಪತ್ನಿಯನ್ನು ಕೊಂದ ಪತಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ಇರಿಸಿರುವ ಘಟನೆ ಹೈದರಾಬಾದ್ನ ಮೆಡಿಪಲ್ಲಿಯಲ್ಲಿ ನಡೆದಿದೆ. ಸ್ವಾತಿ ಅಲಿಯಾಸ್ ಜ್ಯೋತಿ (22) ಹೀಗೆ ಬರ್ಬರವಾಗಿ ಹತ್ಯೆಯಾಗಿರುವ ಗರ್ಭಿಣಿ. ಮಹೇಂದರ್ ರೆಡ್ಡಿ ಕೊಲೆ ಆರೋಪಿ.
ವಿಕಾರಾಬಾದ್ ಜಿಲ್ಲೆಯ ಈ ದಂಪತಿ ಮೆಡಿಪಲ್ಲಿ ಬೋಡುಪ್ಪಲ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಶಬ್ದ ಕೇಳಿದ ಬಳಿಕ ಅಕ್ಕಪಕ್ಕದ ಮನೆಯವರು ಎಚ್ಚೆತ್ತು ಒಳಗೆ ಹೋದಾಗ ಸ್ವಾತಿಯ ಶವವನ್ನು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ಇಡಲಾಗಿತ್ತು.
ಸ್ಥಳೀಯ ಮಾಹಿತಿ ಆಧರಿಸಿ ಪೊಲೀಸರು ಆಗಮಿಸಿ ಆರೋಪಿ ಮಹೇಂದರ್ ನನ್ನು ವಶಕ್ಕೆ ಪಡೆದರು. ಆತ ಹೆಂಡತಿಯನ್ನು ಕೊಂದು ಶವವನ್ನು ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಚೀಲದಲ್ಲಿ ಇಟ್ಟುಕೊಂಡು ವಿಲೇವಾರಿ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಗ್ರೇಟರ್ ನೋಯ್ಡಾದಲ್ಲಿ ಗಂಡ ಮಗನ ಎದುರೇ ಹೆಂಡತಿಗೆ ಬೆಂಕಿ ಹಚ್ಚಿ ಸಾಯಿಸಿರುವ ಪ್ರಕರಣ ಬಯಲಾಗಿದೆ. ವರದಕ್ಷಿಣೆಗಾಗಿ ಪತಿ, ಮಾವ, ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಕೊಲೆಯಾಗಿರುವ ಮಹಿಳೆಯ ಸೋದರಿ ತಿಳಿಸಿದ್ದಾರೆ.