Tuesday, November 11, 2025
Menu

ಮದುವೆಯಾಗಿ ಎಂಟು ತಿಂಗಳಿಗೆ ಪತ್ನಿಯ ಕಿರುಕುಳಕ್ಕೆ ಪತಿ ಸುಸೈಡ್‌

ಬೆಂಗಳೂರಿನ ಗಿರಿನಗರದ ಮನೆಯೊಂದರಲ್ಲಿ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗಗನ್ ರಾವ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ ಬ್ಯಾಂಕ್ ಉದ್ಯೋಗಿ.

ಎಂಟು ತಿಂಗಳ ಹಿಂದೆ ಮೇಘನ ಜಾಧವ್‌ ಜೊತೆ ಗಗನ್ ಮದುವೆಯಾಗಿತ್ತು. ಮದುವೆಯಾಗಿ ಎಂಟು ತಿಂಗಳಲ್ಲಿ ಪತ್ನಿ ವಿನಾಕಾರಣ ಜಗಳವಾಡಲು ಶುರು ಮಾಡಿದ್ದಳು ಎಂದು ಆರೋಪಿಸಲಾಗಿದೆ.

ಮದುವೆಯ ನಂತರ ಪತ್ನಿ-ಪತಿಯ ನಡುವೆ ಜಗಳ ಆರಂಭವಾಗಿ ಗಗನ್ ರಾವ್ ಮಾನಸಿಕವಾಗಿ ನೊಂದಿದ್ದ. ಪತ್ನಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣವೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಸಸಂಬಂಧ ಗಗನ್‌ ತಂಗಿ ದೂರು ನೀಡಿದ್ದಾರೆ.

ಹಿಂದಿನ ರಾತ್ರಿ ಮನೆಯಲ್ಲಿ ಪತಿ-ಪತ್ನಿ ಜಗಳ ಮಾಡಿಕೊಂಡಿದ್ದಾರೆ. ಗಗನ್ ರಾವ್ ತೀವ್ರ ನೊಂದುಕೊಂಡು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅಣ್ಣನ ಸಾವಿಗೆ ಪತ್ನಿಯೇ ಕಾರಣ ಎಂದು ತಂಗಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯಪುರದಲ್ಲಿ ಅರ್ಚಕನ ಹತ್ಯೆ

ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೇರಿ ಅಮೋಘಸಿದ್ಧ ದೇವಸ್ಥಾನದ ಅರ್ಚಕರ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಅಮಸಿದ್ಧ ಬಿರಾದಾರ (35)ಹತ್ಯೆಯಾದವರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Posts

Leave a Reply

Your email address will not be published. Required fields are marked *