Menu

ಟ್ರಂಪ್ ಆ್ಯಪ್ ಹೆಸರಲ್ಲಿ ನೂರಾರು ಮಂದಿಗೆ ಕೋಟ್ಯಾಂತರ ರೂ. ವಂಚನೆ

ಸೋಶಿಯಲ್​ ಮೀಡಿಯಾ ಬಳಸಿಕೊಂಡು ನಾನಾ ರೀತಿಗಳಲ್ಲಿ ವಂಚನೆ ಪ್ರತಿದಿನವೂ ವರದಿಯಾಗುತ್ತಿದೆ. ಸೈಬರ್ ವಂಚಕರು ದೊಡ್ಡ ಅಧಿಕಾರಿಗಳ ಅಥವಾ ರಾಜಕಾರಣಿಗಳ ಹೆಸರಿನಲ್ಲಿ ಜನ ಸಾಮಾನ್ಯರನ್ನು ವಂಚಿಸುತ್ತಾರೆ. ಈಗ ಆ ಪಟ್ಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರೂ ಸೇರ್ಪಡೆಯಾಗಿದೆ.

ಡೊನಾಲ್ಡ್ ಟ್ರಂಪ್ಹೆಸರಿನಲ್ಲಿ ಸೈಬರ್ ಖದೀಮರು ಕೋಟ್ಯಂತರ ರೂ. ದೋಚಿದ್ದಾರೆ. ರಾಜ್ಯದಲ್ಲಿ ಕೂಡ ನೂರಾರು ಜನ ಈ ವಂಚನೆಗೆ ಒಳಗಾಗಿದ್ದಾರೆ. ಸೈಬರ್​ ಖದೀಮರು ಟ್ರಂಪ್ ಹೆಸರಿನಲ್ಲಿ ಮೊಬೈಲ್ ಆ್ಯಪ್ ಸೃಷ್ಟಿಸಿ ವ್ಯಾಪಾರಸ್ಥರು, ವಕೀಲರು, ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಟೋಪಿ ಹಾಕಿದ್ದಾರೆ. ಹಾವೇರಿ ಜಿಲ್ಲೆಯಲ್ಲಿಯೇ 15ಕ್ಕೂ ಅಧಿಕ ಜನರು ವಂಚನೆ ಒಳಗಾಗಿದ್ದು, ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ ಧಾರವಾಡ ಮತ್ತು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಂಚನೆ ನಡೆದಿದೆ.

ಟ್ರಂಪ್ ಆ್ಯಪ್ ಬಗ್ಗೆ ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸಿದ್ದು, ಜಾಹೀರಾತಿನಲ್ಲಿ ನೀಡಿದ ನಂಬರ್​ಗಳಿಗೆ ನೂರಾರು ಜನರು ಕರೆ ಮಾಡಿದ್ದಾರೆ. ಕರೆ ಮಾಡಿದ ಜನರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಆಮಿಷ ತೋರಿಸಲಾಗಿದೆ. ಮೊದಲು ಟ್ರಂಪ್ ಆ್ಯಪ್​​ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ ನೀಡಲಾಗಿದೆ. ಬಡ್ಡಿ ಹಣ ನೀಡಿ ನಂಬಿಕೆ ಗಳಿಸಿಕೊಂಡಿದ್ದ ಸೈಬರ್​ ವಂಚಕರು ನಂತರ ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದು ಕೋಟ್ಯಂತರ ರೂ. ಹಾಕಿದ್ದಾರೆ. ಹಣ ಹಾಕುತ್ತಿದ್ದಂತೆ ಸೈಬರ್ ಕಳ್ಳರು ನಾಪತ್ತೆ ಆಗಿದ್ದಾರೆ. ಆದರೆ ಈ ಬಗ್ಗೆ ಪೊಲೀಸ್​ ದೂರು ದಾಖಲಾಗಿಲ್ಲ.

Related Posts

Leave a Reply

Your email address will not be published. Required fields are marked *